ADVERTISEMENT

ಸೇನೆಗೆ ಸೇರುವ ತುಡಿತ ಇರಲಿ: ಕರ್ನಲ್ ಅಕ್ಕುಲ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:38 IST
Last Updated 27 ಜುಲೈ 2021, 19:38 IST
ಕರ್ನಲ್ ಅಕ್ಕುಲ ಬಾಲಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಾರಾಯಣ ಒಲಿಂಪಿಯಾಡ್ ಶಾಲೆಯ ಎಜಿಎಂ ಶೀಜು,  ಪ್ರಾಂಶುಪಾಲರಾದ ಸಿ.ಎಸ್.ಲತಾ, ಆಡಳಿತ ಮಂಡಳಿ ಮುಖ್ಯಸ್ಥ ಅಶ್ವತ್ಥರಾಜು ಇದ್ದಾರೆ. 
ಕರ್ನಲ್ ಅಕ್ಕುಲ ಬಾಲಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನಾರಾಯಣ ಒಲಿಂಪಿಯಾಡ್ ಶಾಲೆಯ ಎಜಿಎಂ ಶೀಜು,  ಪ್ರಾಂಶುಪಾಲರಾದ ಸಿ.ಎಸ್.ಲತಾ, ಆಡಳಿತ ಮಂಡಳಿ ಮುಖ್ಯಸ್ಥ ಅಶ್ವತ್ಥರಾಜು ಇದ್ದಾರೆ.    

ಬೆಂಗಳೂರು: ‘ಭಾರತೀಯ ಸೇನೆ ಅಸಾಧಾರಣ ನಾಯಕತ್ವ ಕೌಶಲ, ಶೌರ್ಯ ಮತ್ತು ಹೋರಾಟಕ್ಕೆ ಖ್ಯಾತಿ ಹೊಂದಿದೆ. ಇಂತಹ ಸೇನೆಗೆ ಸೇರಲು ವಿದ್ಯಾರ್ಥಿಗಳು ಹೆಚ್ಚಿನ ತುಡಿತ ಹೊಂದಿರಬೇಕು’ ಎಂದು ಕರ್ನಲ್ ಅಕ್ಕುಲ ಬಾಲಕೃಷ್ಣ ತಿಳಿಸಿದರು.

ಎಚ್‌ಎಸ್‌ಆರ್ ಬಡಾವಣೆಯನಾರಾಯಣ ಒಲಿಂಪಿಯಾಡ್ ಶಾಲೆಯಲ್ಲಿಕಾರ್ಗಿಲ್ ವಿಜಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ಸೇವೆ, ತ್ಯಾಗ ಮತ್ತು ಗೌರವ ಸಶಸ್ತ್ರ ಪಡೆಗಳಲ್ಲಿ ಒಂದು ಜೀವನ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಪ್ರಸ್ತುತರಾಜ್ಯದ ಗರುಡ ಕಮಾಂಡೋ ಪೊಲೀಸ್‌ ಪಡೆಯಲ್ಲಿಭಯೋತ್ಪಾದನೆ ನಿಗ್ರಹ ತರಬೇತಿ ನೀಡುತ್ತಿರುವಬಾಲಕೃಷ್ಣ ಅವರು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಬಾಂಬ್ ವಿಲೇವಾರಿ ಘಟಕದ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.