ADVERTISEMENT

ಪರಿಹಾರ ಸೂಚಿಸಲು ‘ಲೆಟ್ಸ್ ಟೇಕ್ ಚಾರ್ಜ್’ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 18:48 IST
Last Updated 2 ನವೆಂಬರ್ 2020, 18:48 IST

ಬೆಂಗಳೂರು: ‘ರಾಜ್ಯದಲ್ಲಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ‘ಲೆಟ್ಸ್ ಟೇಕ್ ಚಾರ್ಜ್’ ಅಭಿಯಾನದಡಿ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಯುವ ಕಾಂಗ್ರೆಸ್‌ನ ಬೆಂಗಳೂರು ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಇಚ್ಛಿಸುವ ಯುವಜನಾಂಗಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಪರಿಹಾರ ಮಾರ್ಗಗಳನ್ನು ಯುವಕ, ಯುವತಿಯರು ಹಂಚಿಕೊಂಡಿದ್ದಾರೆ' ಎಂದರು.

‘ಬೆಂಗಳೂರು ನಗರ ಜಿಲ್ಲೆಯಿಂದ ಹೆಚ್ಚಿನ ಮಂದಿ ಪರಿಹಾರ ಸೂಚಿಸಿದ್ದು, ಮೈಸೂರು, ಶಿವಮೊಗ್ಗ, ತುಮಕೂರು, ಧಾರವಾಡ, ಹಾವೇರಿ, ಉತ್ತರ ಕನ್ನಡ,ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ, ಕೊಪ್ಪಳ, ಬೀದರ್, ರಾಯಚೂರು ಮತ್ತು ಉಡುಪಿ ಜಿಲ್ಲೆಗಳಿಂದ ಸ್ಪರ್ಧಾಳುಗಳು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಸ್ಪರ್ಧೆಯಲ್ಲಿ ಭಾಗವಹಿಸಿ, ಉತ್ತಮಪರಿಹಾರ ಸೂಚಿಸುವ ವಿಜೇತರಿಗೆ ಐಫೋನ್-12 (ಪ್ರಥಮ), ಸ್ಯಾಮ್‍ಸಂಗ್ ಗ್ಯಾಲಕ್ಸಿ ಎ-51 (ದ್ವಿತೀಯ), ಗ್ಯಾಲಕ್ಸಿಎ21 (ತೃತೀಯ) ಹಾಗೂ ಟ್ಯಾಬ್(ನಾಲ್ಕನೇ ಬಹುಮಾನ) ನೀಡಲಾಗುವುದು’ ಎಂದು ನಲಪಾಡ್ ತಿಳಿಸಿದರು.

ಮಾಹಿತಿಗೆ: 9999835988

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.