ADVERTISEMENT

‘ಜೀವರಕ್ಷಾ’ ತುರ್ತು ಚಿಕಿತ್ಸೆ ತರಬೇತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 19:58 IST
Last Updated 25 ನವೆಂಬರ್ 2020, 19:58 IST

ಬೆಂಗಳೂರು: ತುರ್ತು ಚಿಕಿತ್ಸೆಗೆ ಸಹಕಾರಿಯಾಗು­ವಂತೆ ಜೀವರಕ್ಷಾ ಟ್ರಸ್ಟ್ ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಸಮಗ್ರ ತುರ್ತು ಚಿಕಿತ್ಸೆ ಮತ್ತು ಜೀವ ರಕ್ಷಣಾ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದೆ.

ಮೊಬೈಲ್ ತುರ್ತಿಚಿಕಿತ್ಸೆ ಆರೈಕೆ ತರಬೇತಿ ವಾಹನವನ್ನು ಈ ಕಾರ್ಯಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದು, ವೈದ್ಯರು, ಶಿಕ್ಷಕರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಶುಶ್ರೂಷಕರು, ಪೊಲೀಸರು ಹಾಗೂ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತದೆ.ಲೀಲಾ ಮತ್ತು ರವಿವರ್ಮ ಅವರ ಸ್ಮರಣಾರ್ಥ ಮೊಬೈಲ್ ವಾಹನವನ್ನು ಟ್ರಸ್ಟ್‌ ವಿಶ್ವವಿದ್ಯಾಲಯಕ್ಕೆ ದಾನವಾಗಿ ನೀಡಿದೆ.

‘ರಸ್ತೆ ಅಪಘಾತ, ಭೂಕುಸಿತ, ಹೃದಯಾ­ಘಾತ, ಪಾರ್ಶ್ವವಾಯು ಮತ್ತಿತರ ತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ಉಪಚರಿಸುವ ರೀತಿಯ ಬಗ್ಗೆ ತರಬೇತಿ ಕೊಡಲಾಗುವುದು. ಈ ತರಬೇತಿಯಿಂದ ವೈದ್ಯರಿಗೆ ಸೇರಿದಂತೆ ವಿವಿಧ ವರ್ಗದವರಿಗೆ ತುರ್ತು ಚಿಕಿತ್ಸೆಯಲ್ಲಿ ಕೈಗೊಳ್ಳ ಬೇಕಾದ ಚಿಕಿತ್ಸಾ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ದೊರೆಯಲಿದೆ. ದೇಶದಲ್ಲಿರಸ್ತೆ ಸಂಚಾರ ಅಪಘಾತದಿಂದ ಗಂಟೆಗೆ 17 ಮಂದಿ ಮೃತಪಡುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ವ್ಯಕ್ತಿಗೆ ಅಗತ್ಯ ಆರೈಕೆ ಮಾಡುವ ಮೂಲಕ ಅವರನ್ನು ಉಳಿಸಿಕೊಳ್ಳ ಬಹುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.