ADVERTISEMENT

ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು: ಲಯನ್ಸ್‌ ಪ್ರಾಂತೀಯ ಸಮ್ಮೇಳನ ನಾಳೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:38 IST
Last Updated 11 ಡಿಸೆಂಬರ್ 2025, 19:38 IST
   

ಬೆಂಗಳೂರು: ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು ಇದೇ 13ರಂದು ವಿಜಯನಗರದಲ್ಲಿರುವ ಕಾಸಿಯಾ ಸಭಾಂಗಣದಲ್ಲಿ ಲಯನ್ಸ್‌ ಇಂಟರ್‌ನ್ಯಾಷನಲ್‌–317ಎ ಪ್ರಾಂತೀಯ ಸಮ್ಮೇಳನ ನಡೆಯಲಿದೆ. 

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತೀಯ ಅಧ್ಯಕ್ಷ ರಾಜಾ ನಂಜುಂಡಯ್ಯ, ‘ಸೇನೆ ಹಾಗೂ ಸೇವೆ ಘೋಷ ವಾಕ್ಯದೊಂದಿಗೆ ಪ್ರಾಂತೀಯ ಸಮ್ಮೇಳನವನ್ನು ಹಮ್ಮಿ
ಕೊಳ್ಳುತ್ತಿದ್ದೇವೆ. ಸಮ್ಮೇಳನವನ್ನ ಡಾ.ಬಿ.ಬಿ. ರಘುನಾಥ್ ಅವರು ಉದ್ಘಾಟಿಸಲಿದ್ದಾರೆ. ಗುಬ್ಬಿ ಲಯನ್ಸ್‌ ಕ್ಲಬ್‌ ವತಿಯಿಂದ ₹10 ಲಕ್ಷ ಮೌಲ್ಯದ ಮೋಕ್ಷ ವಾಹನ (ಶವ ತೆಗೆದುಕೊಂಡು ಹೋಗುವ) ಲೋಕಾರ್ಪಣೆ ಮಾಡಲಾಗುತ್ತದೆ. ಇದರ ಜೊತೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.ಗಾಯತ್ರಿ ಗಿರೀಶ್‌, ಗೋಪಾಲಕೃಷ್ಣ ಮನುವಾಚಾರ್ಯ ಸುದ್ದಿಗೋಷ್ಠಿಯಲ್ಲಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT