ADVERTISEMENT

ಮಾಚೋಹಳ್ಳಿ: ಶಾಸಕರಿಂದ ನೂರು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:45 IST
Last Updated 23 ನವೆಂಬರ್ 2020, 19:45 IST
ಮಾಗಡಿ ರಸ್ತೆಯ ಮಾಚೋಹಳ್ಳಿ ಕಾಲೋನಿಯ್ಲಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಹಕ್ಕು ಪತ್ರ ವಿತರಿಸಿದರು.
ಮಾಗಡಿ ರಸ್ತೆಯ ಮಾಚೋಹಳ್ಳಿ ಕಾಲೋನಿಯ್ಲಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಹಕ್ಕು ಪತ್ರ ವಿತರಿಸಿದರು.   

ಬೆಂಗಳೂರು: ಮಾಗಡಿ ಮುಖ್ಯರಸ್ತೆ ಬಳಿಯ ಮಾಚೋಹಳ್ಳಿ ಕಾಲೊನಿ ಯಲ್ಲಿಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ನೂರು ಕುಟುಂಬಗಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಹಕ್ಕುಪತ್ರ ವಿತರಿಸಿದರು.

‘ಶೀಘ್ರವೇ ಇನ್ನುಳಿದ 350ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡ ಲಾಗುವುದು. ಕಾಚೋಹಳ್ಳಿ, ಕಡಬಗೆರೆ ಸೇರಿದಂತೆ ಹಲವು ಗ್ರಾಮಗಳ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಎಲ್ಲರಿಗೂ ಹಂತಹಂತವಾಗಿ ಹಕ್ಕುಪತ್ರ ವಿತರಿಸಲಾಗುವುದು’ ಎಂದು ವಿಶ್ವನಾಥ್‌ ಭರವಸೆ ನೀಡಿದರು.

ಸ್ಥಳೀಯ ಮುಖಂಡ ಎಂ.ಬಿ.ನರಸಿಂಹಮೂರ್ತಿ, ‘ಶಾಸಕರ ನೆರವಿ ನಿಂದಾಗಿ ಮಾಚೋಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 35 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳು ನಡೆದಿವೆ’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಬಿ. ನರಸಿಂಹಮೂರ್ತಿ. ಮುಖಂಡರಾದ ಎಂ.ಬಿ. ಮಂಜುನಾಥ್, ರಾಮಕೃಷ್ಣಯ್ಯ, ಎಂ.ಬಿ. ಮುರಳಿ, ತಹಶೀಲ್ದಾರ್ ಶಿವರಾಜು, ಉಪತಹಶೀಲ್ದಾರ್ ಶ್ರೀಧರ್, ರೆವಿನ್ಯೂ ಇನ್‍ಸ್ಪೆಕ್ಟರ್ ಅನಂತ ಪದ್ಮನಾಭ, ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಪಂಚಾಯ್ತಿ ಅಧಿಕಾರಿ ಸುಮಲತಾ, ಜಿ.ಪಂ.ಸದಸ್ಯ ಉದ್ದಂಡಯ್ಯ, ಶ್ರೀನಿವಾಸ್, ಚಂದ್ರಶೇಖರ್, ಕಂಟಿ, ವೆಂಕಟೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.