ಬೆಂಗಳೂರು: ವಿಶ್ವದ ಪ್ರತಿಷ್ಠಿತ ಚಿನ್ನ ಮತ್ತು ವಜ್ರಾಭರಣ ಕಂಪನಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ ಎಲ್ಲ ಶಾಖೆಗಳಲ್ಲಿ ವಜ್ರಾಭರಣ ಮೇಳ (ಮೈನ್ ಡೈಮಂಡ್ ಫೆಸ್ಟಿವಲ್) ಆಯೋಜಿಸಿದ್ದು, ಜ.17ರವರೆಗೆ ಮೇಳ ನಡೆಯಲಿದೆ.
ನೂರಾರು ಬಗೆ ಹಾಗೂ ವಿನ್ಯಾಸದ ವಜ್ರಾಭರಣಗಳು ಈ ಸಂದರ್ಭದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಆಧುನಿಕ ಮತ್ತು ಸಾಂಪ್ರದಾಯಿಕ ಎರಡರ ಮಿಶ್ರಣದಂತಿರುವ ಈ ಆಭರಣಗಳು ಗ್ರಾಹಕರನ್ನು ಆಕರ್ಷಿಸಲಿವೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
ಈ ಮೇಳ ಮುಗಿಯುವವರೆಗೆ ವಜ್ರಾಭರಣಗಳ ಬೆಲೆಯಲ್ಲಿ ಶೇ 20ರಷ್ಟು ರಿಯಾಯಿತಿ ಇರಲಿದೆ. ಕೈಗೆಟಕುವ ದರದಲ್ಲಿ ಈ ಆಭರಣಗಳನ್ನು ಗ್ರಾಹಕರು ಖರೀದಿಸಬಹುದು ಎಂದು ಕಂಪನಿ ಹೇಳಿದೆ.
ಆಭರಣದ ತಯಾರಿಕೆ ವೆಚ್ಚವನ್ನು ಬೆಲೆಯೊಂದಿಗೆ ನಿರ್ದಿಷ್ಟವಾಗಿ ನಮೂದಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಚಿನ್ನದ ಆಭರಣಗಳನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನೂ ಕಂಪನಿ ನೀಡಿದ್ದು, ಇದಕ್ಕೆ ಯಾವುದೇ ಶುಲ್ಕ ಇಲ್ಲ. ಆಭರಣದ ಶೇ 10ರಷ್ಟು ಮೊತ್ತವನ್ನು ಪಾವತಿಸಿ, ಮುಂಗಡ ಕಾಯ್ದಿರಿಸುವ ಅವಕಾಶವೂ ಇದೆ ಎಂದು ಕಂಪನಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.