ಬೆಂಗಳೂರು: ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದರಾಷ್ಟ್ರೀಯ ನಾಟಕ ಶಾಲೆಯು (ಎನ್ಎಸ್ಡಿ)‘ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗದ ಪ್ರದರ್ಶನವನ್ನು ವಿಸ್ತರಿಸಿದೆ.
ಕುವೆಂಪು ಅವರ ಕಾದಂಬರಿ ಆಧಾರಿತ ಈ ನಾಟಕವು ಈವರೆಗೆ 108 ಪ್ರದರ್ಶನ ಕಂಡಿದೆ. ಈ ಆವೃತ್ತಿಯಲ್ಲಿ 24 ಪ್ರದರ್ಶನವನ್ನು ಹಮ್ಮಿಕೊಂಡಿದ್ದ ಎನ್ಎಸ್ಡಿ, ಫೆ.29ಕ್ಕೆ109ನೇ ಪ್ರದರ್ಶನ ನೀಡುವ ಮೂಲಕ ಈ ರಂಗ ಪ್ರಯೋಗಕ್ಕೆ ತೆರೆ ಎಳೆಯುವುದಾಗಿ ಘೋಷಿಸಿತ್ತು. ಶುಕ್ರವಾರ ಮತ್ತು ಶನಿವಾರದ ಕಡೆಯ ಎರಡು ಪ್ರದರ್ಶನಗಳ ಟಿಕೆಟ್ಗಳು ಮುಂಚಿತವಾಗಿಯೇ ಮಾರಾಟವಾಗಿವೆ. ಹೀಗಾಗಿ, ಮಾರ್ಚ್ 6 ಮತ್ತು ಮಾರ್ಚ್ 7ಕ್ಕೆ ಹೆಚ್ಚುವರಿಯಾಗಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.