ADVERTISEMENT

ನೀರು ಸೋರಿಕೆ ತಡೆಯಲು ₹ 34 ಕೋಟಿ ಯೋಜನೆ: ಸಿ.ಎನ್.‌ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 20:18 IST
Last Updated 3 ಜುಲೈ 2021, 20:18 IST
ಮಲ್ಲೇಶ್ವರದ ಗಾಯತ್ರಿನಗರದಲ್ಲಿ ನೀರು ಪೂರೈಕೆ ಕೊಳವೆಗಳ ಬದಲಾವಣೆ ಕಾಮಗಾರಿಗೆ ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಚಾಲನೆ ನೀಡಿದರು
ಮಲ್ಲೇಶ್ವರದ ಗಾಯತ್ರಿನಗರದಲ್ಲಿ ನೀರು ಪೂರೈಕೆ ಕೊಳವೆಗಳ ಬದಲಾವಣೆ ಕಾಮಗಾರಿಗೆ ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಚಾಲನೆ ನೀಡಿದರು   

ಬೆಂಗಳೂರು: ‘ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಲಮಂಡಳಿ ನೀರು ಪೂರೈಕೆಯ ಹಳೆಯ ಕೊಳವೆಗಳನ್ನು ₹34 ಕೋಟಿ ವೆಚ್ಚದಲ್ಲಿ ಬದಲಾವಣೆ ಮಾಡಲಾಗುತ್ತಿದೆ’ ಎಂದು ಕ್ಷೇತ್ರದ ಶಾಸಕರೂ ಆಗಿರುವ ಉಪಮುಖ್ಯಮಂತ್ರಿ ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಗಾಯತ್ರಿನಗರದಲ್ಲಿ ₹94 ಲಕ್ಷ ಮೊತ್ತದಲ್ಲಿ ಪೈಪುಗಳ ಬದಲಾವಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹಳೆಯ ಕೊಳವೆಗಳಿಂದ ಭಾರಿ ಪ್ರಮಾಣದ ನೀರು ಸೋರಿಕೆ ಆಯುತ್ತಿದೆ. ಇದನ್ನು ತಡೆಯುವುದರ ಜೊತೆಗೆ, ನೀರಿನ ಶುದ್ಧತೆ ಕಾಪಾಡಿಕೊಳ್ಳುವುದು ಯೋಜನೆಯ ಉದ್ದೇಶ’ ಎಂದರು.

‘ಕ್ಷೇತ್ರದಲ್ಲಿ ಸುಮಾರು 7 ಸಾವಿರ ಮ್ಯಾನ್‌ಹೋಲ್‌ಗಳಿವೆ. ಇವೆಲ್ಲವೂ ಹಳೆಯದಾಗಿದ್ದು, ಅವುಗಳನ್ನು ಬದಲಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 4 ಸಾವಿರ ಮ್ಯಾನ್‌ಹೋಲ್‌ಗಳನ್ನು ಸರಿಪಡಿಸಿ, ಮುಂದಿನ ಹಂತದಲ್ಲಿ ಉಳಿದವುಗಳನ್ನು ದುರಸ್ತಿಗೊಳಿಸಲಾಗುವುದು’ ಎಂದರು.

ADVERTISEMENT

ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್.ದಲಾಯತ್, ಬಿಜೆಪಿ‌ ಮುಖಂಡ ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.