ಬೆಂಗಳೂರು: ‘ಸಲಾಂ’ ಹೇಳುವಂತೆ ಬೆದರಿಸಿ ಕಪಾಳಕ್ಕೆ ಹೊಡೆದ ಎಂಬ ಕಾರಣಕ್ಕೆ ರೌಡಿ ಮುಜಾಹಿದ್ದೀನ್ ಅಲಿಯಾಸ್ ಮುಜಾ (43) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಆರೋಪಿ ಜಾಫರ್ (26) ಎಂಬಾತನನ್ನು ಬಂಧಿಸಲಾಗಿದೆ.
‘ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿ ಶಂಪೂರ ಬಳಿಯ ಸಮೋಸ ಮಳಿಗೆ ಎದುರು ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಆರೋಪಿಯನ್ನು ಗಾರೆ ಕೆಲಸಗಾರ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.