ADVERTISEMENT

‘ಮಂಗಳೂರು ಲಿಟ್ ಫೆಸ್ಟ್’ ನಾಳೆ ಆರಂಭ

stroke day

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:15 IST
Last Updated 1 ನವೆಂಬರ್ 2018, 19:15 IST
ಎಂ.ಎನ್.ವೆಂಕಟಾಚಲಯ್ಯ (ಎಡದಿಂದ ನಾಲ್ಕನೆಯವರು) ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು. (ಎಡದಿಂದ) ಬಿ.ಆರ್ ಲೈಫ್ ಆಸ್ಪತ್ರೆಯ ನಿರ್ದೇಶಕ ಡಾ.ಅಜಯ್ ರಾಜ್ ಮಲ್ಪೆ, ಸಿಇಒ ಹೇಮರಾಜ್ ಸಿಂಗ್, ಮುಖ್ಯ ಪೋಸ್ಟ್ ಮಾಸ್ಟರ್ ಡಾ.ಚಾರ್ಲ್ಸ್ ಲೋಬೊ ಮತ್ತು ನರರೋಗ ತಜ್ಞ ಡಾ.ಎನ್.ಕೆ ವೆಂಕಟರಮಣ ಇದ್ದಾರೆ -ಪ್ರಜಾವಾಣಿ ಚಿತ್ರ

ಬೆಂಗಳೂರು: ಮಂಗಳೂರು ಲಿಟ್ರೇಚರ್ ಟ್ರಸ್ಟ್ ಇದೇ 3ರಿಂದ ಎರಡು ದಿನ ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸಲಾಗಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಫೆಸ್ಟ್‌ ಸಂಯೋಜಕ ವಿವೇಕ್ ಮಲ್ಯ, ‘ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ನ. 3ರಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು,ಲೇಖಕಿ ಸಂಧ್ಯಾ ಪೈ ಉದ್ಘಾಟಿಸಲಿದ್ದಾರೆ. ಸಂಜೆ 5ಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು’ ಎಂದರು.

ಸಾಹಿತಿ ಮತ್ತು ಓದುಗರ ಸಂವಾದ, ಮಾಹಿತಿ ತಂತ್ರಜ್ಞಾನ, ಪ್ರಚಲಿತ ಘಟನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಬಿ.ಎನ್. ಹೆಗಡೆ, ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ. ಮಾಹಿತಿಗೆ 9742094356 ಸಂಪರ್ಕಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.