ADVERTISEMENT

ಪಿಐಎಲ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:30 IST
Last Updated 25 ಫೆಬ್ರುವರಿ 2023, 22:30 IST
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್‌ ಪುರುಷರ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್‌ ಪುರುಷರ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ವೈವಾಹಿಕ ಅತ್ಯಾಚಾರ ಕಾನೂನು ಜಾರಿಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪಿಐಎಲ್ ಅನ್ನು ವಜಾಗೊಳಿಸಲು ಆಗ್ರಹಿಸಿ, ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್‌ನ ಪುರುಷ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ
ನಡೆಸಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿರುದ್ಧ ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹ ನಡೆದಿದ್ದು, ಅದರ ಅಂಗವಾಗಿ ನಗರದಲ್ಲೂ ಪ್ರತಿಭಟನೆ ನಡೆಯಿತು.

‘ಈ ಕಾನೂನು ಜಾರಿಯಾದರೆ ಪತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಅಮಾಯಕರು ಜೈಲು ಪಾಲಾಗುತ್ತಾರೆ. ಉದ್ಯೋಗ, ಆಸ್ತಿ ಹಾಗೂ ಸಾಮಾಜಿಕ ಖ್ಯಾತಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಪುರುಷರು ಆಘಾತಕ್ಕೂ ಒಳಗಾಗಲಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

ADVERTISEMENT

ವೈವಾಹಿಕ ಅತ್ಯಾಚಾರ ಕಾನೂನಿನ ಮೇಲಿನ ಪಿಐಎಲ್ ವಜಾಗೊಳಿಸಬೇಕು. ಮದುವೆಯಲ್ಲಿ ಲೈಂಗಿಕ ದೌರ್ಜನ್ಯದ ವಿಷಯವನ್ನು ಸಂಸತ್ತು ಪರಿಶೀಲಿಸಬಹುದು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಪುರುಷ ಸಂತ್ರ
ಸ್ತರಿಗೆ ನ್ಯಾಯಾಲಯದಿಂದ ರಕ್ಷಣೆ ನೀಡಬೇಕು. ತನಿಖೆಯ ಸಮಯದಲ್ಲಿ ಪೊಲೀಸ್ ಠಾಣೆಗಳಲ್ಲಿ ಸುಳ್ಳು ಆರೋಪಗಳನ್ನು ಪರಿಶೀಲಿ
ಸಬೇಕು. ಪ್ರತಿ ಪೊಲೀಸ್ ಠಾಣೆ
ಯಲ್ಲಿ ಸುಳ್ಳು ಪ್ರಕರಣಗಳ ಮುಕ್ತಾ
ಯದ ಅಂಕಿಅಂಶ ಪ್ರಕಟಿಸ
ಬೇಕು ಮತ್ತು ವಾರ್ಷಿಕ ಲೆಕ್ಕಪರಿಶೋಧನೆ ನಡೆಸಬೇಕು ಎಂದು
ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅನಿಲ್‌ಕುಮಾರ್, ಸುಜಿತ್‌, ಶಿವಪ್ರಕಾಶ್‌, ನವೀನ್‌ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.