ADVERTISEMENT

ವರನನ್ನು ಬಂಧಿಸಿರುವುದಾಗಿ ಹೇಳಿ ಯುವತಿ ಬಳಿ ₹2.20 ಲಕ್ಷ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 6:39 IST
Last Updated 17 ಜುಲೈ 2022, 6:39 IST

ಬೆಂಗಳೂರು: ಮದುವೆಯಾಗಬೇಕಾದ ಹುಡುಗನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಹೇಳಿ ನಗರದ ಯುವತಿಯೊಬ್ಬರಿಂದ ₹ 2.20 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಸವನಗುಡಿ ನಿವಾಸಿಯಾಗಿರುವ 29 ವರ್ಷದ ಯುವತಿ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ನೀಲ್ ಯಶ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮದುವೆ ಬಗ್ಗೆ ಮಾತನಾಡಲೆಂದು ಭಾರತಕ್ಕೆ ಬರುವುದಾಗಿ ನೀಲ್‌ ಯಶ್ ಎಂಬಾತ ಹೇಳಿದ್ದ. ಇದಾಗಿ ಎರಡು ದಿನಗಳ ನಂತರ ಯುವತಿಗೆ ಕರೆ ಮಾಡಿದ್ದ ಅಪರಿಚಿತ ಮಹಿಳೆಯೊಬ್ಬರು, ‘ನಿಮಗೆ ಪರಿಚಯವಿರುವ ನೀಲ್ ಯಶ್ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಕಸ್ಟಮ್ಸ್ ಶುಲ್ಕ ಪಾವತಿಸಬೇಕು’ ಎಂದಿದ್ದರು. ಅದಕ್ಕೆ ಒಪ್ಪಿದ್ದ ಯುವತಿ ಹಣ ಪಾವತಿಸಿದ್ದರು. ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.