ADVERTISEMENT

ಮುಖಗವಸು: ಸುಲಿಗೆಗೆ ₹ 10 ಸಾವಿರ ದಂಡ

ಔಷಧಿ ಮಳಿಗೆಗಳಲ್ಲಿ ಅಧಿಕ ದರಕ್ಕೆ ಮಾಸ್ಕ್‌ಗಳ ಮಾರಾಟ * ಅಧಿಕಾರಿಗಳಿಂದ ಮುಂದುವರಿದ ದಾಳಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 20:59 IST
Last Updated 17 ಮಾರ್ಚ್ 2020, 20:59 IST
ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ - ಪ್ರಜಾವಾಣಿ ಚಿತ್ರ
ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಮಾಸ್ಕ್‌ಗಳನ್ನು ಮಾರಾಟ ಮಾಡಲಾಗುತ್ತಿದೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಅಗ್ಗದ ದರ‌ದ ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಔಷಧಿ ಮಳಿಗೆಗಳಿಗೆ ತಲಾ ₹ 5 ಸಾವಿರದಿಂದ ₹ 10 ಸಾವಿರದವರೆಗೆ ದಂಡ ವಿಧಿಸಲಾಗಿದೆ.

ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸುತ್ತಿದ್ದಾರೆ. ಕಳೆದ ವಾರ ದೂರುಗಳ ಅನುಸಾರ ದಾಳಿ ನಡೆಸಿ, ನೋಟಿಸ್ ನೀಡಿದ್ದರು. ಆದರೆ,ನಗರದಲ್ಲಿ ಮುಖಗವಸುಗಳಿಗೆ ಒಂದೇ ಸಮನೆ ಬೇಡಿಕೆ ಹೆಚ್ಚುತ್ತಿರುವ ಪರಿಣಾಮ ಕೆಲ ಔಷಧಿ ಮಳಿಗೆಗಳು ಹಾಗೂ ಮಾರಾಟಗಾರರು ವಸೂಲಿಯನ್ನು ಮುಂದುವರಿಸಿದ್ದಾರೆ.ಮೆಜೆಸ್ಟಿಕ್ ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿಯೂ ₹ 5 ಸರ್ಜಿಕಲ್‌ ಮಾಸ್ಕ್‌ಗಳನ್ನು ₹ 50ರ ವರೆಗೂ ಮಾರಾಟ ಮಾಡಲಾಗುತ್ತಿದೆ.

ಎನ್‌–95 ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ರಾಜಾಜಿನಗರದ ಪ್ರಜ್ವಲ್ ಸರ್ಜಿಕಲ್ಸ್ ಆ್ಯಂಡ್‌ ಸೈಂಟಿಫಿಕ್ಸ್‌ ಮಳಿಗೆ ಮೇಲೆ ಪ್ರಕರಣ ದಾಖಲಿಸಿ, ₹ 10 ಸಾವಿರ ದಂಡ ವಿಧಿಸಲಾಗಿದೆ. ಕುಂದೇನಹಳ್ಳಿಯಬ್ರೂಕ್ಫೀಲ್ಡ್ ಆಸ್ಪತ್ರೆಯಲ್ಲಿಯೂ ಮಾಸ್ಕ್‌ಗಳ ಮೇಲೆ ಹೆಚ್ಚುವರಿ ಹಣ ವಸೂಲಿ ಮಾಡಲಾಗಿದ್ದು, ₹ 10 ಸಾವಿರ ದಂಡ ವಿಧಿಸಲಾಗಿದೆ. ಯಶವಂತಪುರದ ಲೈಫ್‌ ಕೇರ್‌ ಮೆಡಿಕಲ್ಸ್‌ಗೆ ₹ 5 ಸಾವಿರ ದಂಡ ವಿಧಿಸಲಾಗುದೆ.

ADVERTISEMENT

ಔಷಧಿ ಮತ್ತು ಮಾಸ್ಕ್‌ಗಳನ್ನು ಮೂಲ ದರಕ್ಕೆ ಮಾರಾಟ ಮಾಡಬೇಕು. ಹೆಚ್ಚಿನ ಹಣ ವಸೂಲಿ ಮಾಡಿದವರಿಗೆ ನೋಟಿಸ್ ಜಾರಿ ಮಾಡಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಔಷಧಿ ನಿಯಂತ್ರಕಭಾಗೋಜಿ ಟಿ. ಖಾನಾಪುರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.