ADVERTISEMENT

ಮಾಹಿತಿ ನೀಡದ್ದಕ್ಕೆ ಮೇಯರ್‌ ಗರಂ

ಅಧಿಕಾರಿಗಳು–ಮೇಯರ್‌ ನಡುವೆ ಮುಸುಕಿನ ಗುದ್ದಾಟ?

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 20:21 IST
Last Updated 25 ಫೆಬ್ರುವರಿ 2020, 20:21 IST

ಬೆಂಗಳೂರು: ಬಿಬಿಎಂಪಿಯ ಆಗುಹೋಗುಗಳು ಮೇಯರ್‌ ಎಂ.ಗೌತಮ್ ಕುಮಾರ್‌ ಅವರಿಗೆ ತಿಳಿಯುತ್ತಿಲ್ಲವೇ? ಅಧಿಕಾರಿಗಳು ಮೇಯರ್‌ ಅವರಿಂದ ಮಾಹಿತಿಗಳನ್ನು ಮುಚ್ಚಿಡುತ್ತಿದ್ದಾರೆಯೇ? ಮೇಯ
ರ್‌ ಹಾಗೂ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯೇ?

ಮೇಯರ್‌ ಅವರು ಪಾಲಿಕೆ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೆಮಂಗಳವಾರ ಕಳುಹಿಸಿರುವ ಪತ್ರದ ಟಿಪ್ಪಣಿ ಇಂತಹದ್ದೊಂದು ಸಂದೇಹ ಮೂಡಿಸಿದೆ. ಕಾನೂನು ಕೋಶದ ಮುಖ್ಯಸ್ಥರ ಮೇಲೆ ಮೇಯರ್‌ ತುಸು ಗರಂ ಆಗಿರುವಂತಿದೆ ಈ ಪತ್ರದ ಒಕ್ಕಣೆ.

‘ಪಾಲಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡುವ ಆದೇಶಗಳು, ಪಾಲಿಕೆಯಿಂದ ನ್ಯಾಯಾಲಯಗಳಿಗೆ ಸಲ್ಲಿಸುವ ವರದಿಗಳು ಮತ್ತು ಪ್ರಸ್ತಾವನೆಗಳು ಹಾಗೂ ಸರ್ಕಾರದ ಪ್ರಮುಖ ಆದೇಶಗಳು ನನ್ನ ಗಮನಕ್ಕೆ ಬರುತ್ತಿಲ್ಲ’ ಎಂದು ಮೇಯರ್‌ ಅವರು ಟಿಪ್ಪಣಿಯಲ್ಲಿ ದೂರಿದ್ದಾರೆ.

ADVERTISEMENT

‘ಇನ್ನು ಮುಂದೆ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬರಲಿರುವ ದಾವೆಗಳು, ನ್ಯಾಯಾಲಯಗಳ ಆದೇಶಗಳು, ಪಾಲಿಕೆಯಿಂದ ಸಲ್ಲಿಸುವ ಪ್ರಮಾಣಪತ್ರಗಳು, ಸರ್ಕಾರಕ್ಕೆ ಸಲ್ಲಿಸುವ ವರದಿಗಳು ಮತ್ತು ಪ್ರಸ್ತಾವಗಳು ಸರ್ಕಾರ ಹೊರಡಿಸುವ ಆದೇಶಗಳನ್ನು ಕಾನೂನು ಕೋಶದ ಮುಖ್ಯಸ್ಥರೂ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ನನ್ನ ಗಮನಕ್ಕೆ ತರಬೇಕು’ ಎಂದು ಮೇಯರ್‌ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಕೆಲವೊಂದು ಮಾಹಿತಿ ಸಿಗದ ಕಾರಣ ಮಾಧ್ಯಮದವರ ಜೊತೆ ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭಗಳಲ್ಲಿ ಮುಜುಗರ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಇಂತಹ ಆದೇಶ ಮಾಡಿದ್ದೇನೆ

ಎಂ. ಗೌತಮ್‌ ಕುಮಾರ್‌, ಬಿಬಿಎಂಪಿ ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.