ADVERTISEMENT

ನಮ್ಮ ಮೆಟ್ರೊ: ಸೆ. 7ರಿಂದ ರೈಲು ಸಂಚಾರ‌ ಆರಂಭ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 6:10 IST
Last Updated 30 ಆಗಸ್ಟ್ 2020, 6:10 IST

ಬೆಂಗಳೂರು: ಮೆಟ್ರೊ ರೈಲು ಸಂಚಾರ ಪು‌ನರಾರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಸೆ. 7ರಿಂದ ನಗರದಲ್ಲಿ ಮೆಟ್ರೊ ರೈಲುಗಳ ಸಾರ್ವಜನಿಕ ಸೇವೆ ಆರಂಭವಾಗಲಿದೆ.

‘ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ಕೆಲವು ನಿರ್ಬಂಧಗಳೊಂದಿಗೆ ಮೆಟ್ರೊ ರೈಲು ಸಂಚಾರ ಆರಂಭಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ ಸಿಎಲ್‌) ಮೂಲಗಳು ಹೇಳಿವೆ.

ನಿರ್ಬಂಧಗಳು:

ADVERTISEMENT

*ಸ್ಮಾರ್ಟ್‌ ಕಾರ್ಡ್‌ ಕಡ್ಡಾಯ: ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಮೆಟ್ರೊ ರೈಲಿನಲ್ಲಿ ಸಂಚರಿಸಲು ಅವಕಾಶ ಸಿಗಲಿದೆ. ಆನ್‌ಲೈನ್‌ ಮೂಲಕ ಮಾತ್ರ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸಿಕೊಳ್ಳಬಹುದು.

* 350 ಜನರಿಗೆ ಮಾತ್ರ ಅವಕಾಶ: ಈ ಹಿಂದೆ ಮೆಟ್ರೊ ರೈಲಿನಲ್ಲಿ ಒಮ್ಮೆಗೆ ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಈಗಒಂದು ರೈಲಿನಲ್ಲಿ ಒಮ್ಮೆಗೆ ಗರಿಷ್ಠ 350 ಜನರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.

ಪ್ರತಿ ನಿಲ್ದಾಣದಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರ ವಿವರ ನಿಯಂತ್ರಣ ಕೊಠಡಿಗೆ ರವಾನೆಯಾಗಲಿದೆ. ಎಷ್ಟು ಪ್ರಯಾಣಿಕರು ಇಳಿಯುತ್ತಾರೋ, ಅಷ್ಟು ಜನ ಮಾತ್ರ ರೈಲು ಏರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

* ಅಂತರ ಪಾಲನೆ: ರೈಲಿನಲ್ಲಿ ಆಸನಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಅಂತರ ನಿಯಮ ಪಾಲಿಸಲಾಗುತ್ತದೆ.

* ದೇಹದ ಉಷ್ಣಾಂಶ ಪರೀಕ್ಷೆ: ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸರ್ ಮತ್ತು ದೇಹದ ಉಷ್ಣಾಂಶ ಪರೀಕ್ಷಿಸುವ (ಥರ್ಮಲ್‌ ಸ್ಕ್ರೀನಿಂಗ್) ಯಂತ್ರ ಇರಲಿದೆ.

* ಮೊದಲಿಗಿಂತ ಕಡಿಮೆ ರೈಲುಗಳು ಸಂಚರಿಸಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.