ADVERTISEMENT

ಸ್ಮಾರ್ಟ್‌ಕಾರ್ಡ್‌: ಏಳು ದಿನಗಳೊಳಗೇ ಬಳಸಿ!

ಮೆಟ್ರೊ ರೈಲುಗಳ ಸೇವೆ 7ರಿಂದ ಪ್ರಾರಂಭ * ಎಸ್‌ಒಪಿ ಬಿಡುಗಡೆಗೊಳಿಸಿದ ಬಿಎಂಆರ್‌ಸಿಎಲ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:29 IST
Last Updated 3 ಸೆಪ್ಟೆಂಬರ್ 2020, 16:29 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲು ಸೇವೆ ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಮೆಟ್ರೊ ರೈಲು ನಿಗಮವು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು (ಎಸ್‌ಒಪಿ) ಗುರುವಾರ ಪ್ರಕಟಿಸಿದೆ.

ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಟೋಕನ್‌ ಮಾರಾಟವನ್ನು ನಿಷೇಧಿಸಲಾಗಿದ್ದು, ಸ್ಮಾರ್ಟ್‌ಕಾರ್ಡ್‌ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಿದ ಮೇಲೆ ಅದನ್ನು ಬಳಸಲು ಮೊದಲು 60 ದಿನಗಳವರೆಗೆ ಸಮಯವಿತ್ತು. ಈಗ, ಇದನ್ನು 7 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅಂದರೆ, ರಿಚಾರ್ಜ್‌ ಮಾಡಿಸಿದ ಏಳು ದಿನದೊಳಗೆ ಆ ಕಾರ್ಡ್‌ ಮೂಲಕ ಮೊದಲು ಪ್ರಯಾಣ ಮಾಡಬೇಕು. ನಿಗಮವು ಸೆ.7ರಿಂದ ಮೊಬೈಲ್‌ ಆ್ಯಪ್‌ ಬಳಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಲ್ಲ ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್‌ಕೋಡ್ ಅಥವಾ ಪೇಟಿಎಂ ಮೂಲಕ, ನಿಲ್ದಾಣದಲ್ಲಿ ನಗದುರಹಿತ ಪಾವತಿ ಮಾಡಿ ಸ್ಮಾರ್ಟ್‌ಕಾರ್ಡ್‌ ಖರೀದಿ ಅಥವಾ ರಿಚಾರ್ಜ್‌ ಮಾಡಬಹುದು.

ADVERTISEMENT

ಇದಲ್ಲದೆ, ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಒಂದು ಗಂಟೆ ಮೊದಲು ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಿಕೊಳ್ಳಬೇಕು. ಇದಕ್ಕೆ, ನಮ್ಮ ಮೆಟ್ರೊ ಮೊಬೈಲ್‌ ಅಪ್ಲಿಕೇಷನ್‌ ಅಥವಾ ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕ ರಿಚಾರ್ಜ್‌ ಮಾಡಿಸಿಕೊಳ್ಳಬೇಕು.

ಮೊದಲಿನಂತೆ, ಪ್ರವೇಶ ಅಥವಾ ನಿರ್ಗಮನ ಗೇಟ್‌ಗಳ ಕಾರ್ಡ್‌ ರೀಡರ್‌ ಮೇಲೆ ಸ್ಮಾರ್ಟ್‌ಕಾರ್ಡ್‌ ಇಡುವ ಬದಲಾಗಿ, 3 ಸೆ.ಮೀ. ದೂರದಿಂದಲೇ ಪ್ರಸ್ತುತಪಡಿಸಬೇಕು ಎಂದು ನಿಗಮ ಹೇಳಿದೆ.

ಸೆ.7ರಿಂದ ನೇರಳೆ ಮಾರ್ಗದಲ್ಲಿ, 9ರಿಂದ ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಸೆ.11ರಿಂದ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಎರಡೂ ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.