ಮೆಟ್ರೊ ರೈಲು
ಬೆಂಗಳೂರು: ಮಹಾಲಕ್ಷ್ಮಿ ನಿಲ್ದಾಣದ ಬಳಿಯಲ್ಲಿ ಹಳಿಯಲ್ಲಿ ದೋಷ ಕಂಡುಬಂದ ಕಾರಣ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲುಗಳ ಸಂಚಾರದಲ್ಲಿ ಮಂಗಳವಾರ ಸಂಜೆ ಸ್ವಲ್ಪಹೊತ್ತು ವ್ಯತ್ಯಯ ಉಂಟಾಗಿತ್ತು.
‘ಹಳಿಯಲ್ಲಿ ದೋಷವಿರುವುದು ಕಂಡುಬಂದ ಕಾರಣ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಇದರಿಂದಾಗಿ ಸಂಜೆ 3.28ರಿಂದ 4.05ರವರೆಗೆ ಹಸಿರು ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ತಿಳಿಸಿದೆ.
ಬಿಎಂಆರ್‌ಸಿಎಲ್ ಪ್ರಯಾಣಿಕರ ಸುರಕ್ಷತೆಗೆ ಅತಿ ಆದ್ಯತೆ ನೀಡುತ್ತದೆ. ಈ ಕಾರಣಕ್ಕಾಗಿಯೇ ತ್ವರಿತವಾಗಿ ದುರಸ್ತಿ ಕೆಲಸವನ್ನು ಕೈಗೊಳ್ಳಲಾಯಿತು. ಸಂಜೆ 4.05ರಿಂದ ಹಸಿರು ಮಾರ್ಗದಲ್ಲಿ ಮೆಟ್ರೊ ರೈಲುಗಳ ಸಂಚಾರ ಪುನರಾರಂಭವಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.