ADVERTISEMENT

ಆಕಾಶಕಾಯವಲ್ಲ ಗುರುಗ್ರಹ: ಶೈಲಜಾ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:16 IST
Last Updated 21 ಮೇ 2019, 19:16 IST

ಬೆಂಗಳೂರು: ಸೋಮವಾರ ರಾತ್ರಿ ಚಂದ್ರನ ಪಕ್ಕದಲ್ಲಿ ಕಾಣಿಸಿಕೊಂಡಿರುವುದು ಆಕಾಶ ಕಾಯವಲ್ಲ, ಅದು ಗುರು ಗ್ರಹ ಎಂದು ಖಗೋಳ ವಿಜ್ಞಾನಿ ಬಿ.ಎಸ್‌.ಶೈಲಜಾ ತಿಳಿಸಿದ್ದಾರೆ.

ಗುರು ಗ್ರಹವು ಇನ್ನೂ ಕೆಲವು ದಿನಗಳ ಕಾಲ ಕಾಣಿಸಿಕೊಳ್ಳಲಿದೆ. ಆಕಾಶ ಕಾಯವಾಗಿದ್ದರೆ, ಬಹು ಹೊತ್ತಿನವರೆಗೆ ಕಾಣಿಸಿಕೊಳ್ಳುವುದಿಲ್ಲ ಮತ್ತು ಹಾದು ಹೋಗುವಾಗ ಬರಿಗಣ್ಣಿಗೂ ಗೋಚರಿಸುವುದಿಲ್ಲ. ಏಕೆಂದರೆ, ಅದರ ಗಾತ್ರ ಚಿಕ್ಕದಾಗಿರುತ್ತದೆ. ಗುರು ಗ್ರಹದಷ್ಟು ಪ್ರಕಾಶಮಾನ ಆಗಿರಬೇಕಾದರೆ, ಬಹು ದೊಡ್ಡ ಕಾಯವೇ ಆಗಿರಬೇಕು. ಒಂದು ವೇಳೆ ಅಂತಹ ಕಾಯ ಹಾದು ಹೋದರೆ, ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT