ಬೆಂಗಳೂರು: ಪ್ರತಿಯೊಂದು ಮಗುವನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ತಾಯಿಯ ಪಾತ್ರ ದೊಡ್ಡದು ಎಂದು ರಾಜ್ಯ ಮಾಹಿತಿ ಆಯುಕ್ತೆ ಬಿ.ಆರ್. ಮಮತಾ ಹೇಳಿದರು.
ಪರಿವರ್ತನಂ ಟ್ರಸ್ಟ್ ಹಾಗೂ ಮಾಯಾ ಫೌಂಡೇಶನ್ ಹಮ್ಮಿಕೊಂಡಿದ್ದ ‘ತಾಯಂದಿರ ದಿನಾಚರಣೆ’, ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರಕೃತಿಯಲ್ಲಿ ಇರುವ ಎಲ್ಲ ರೀತಿಯ ಜೀವಿಗಳಲ್ಲೂ ತನ್ನ ಮಗುವಿಗಾಗಿ ಸದಾ ಮಿಡಿಯುವ ಜೀವವೆಂದರೆ ಅದು ತಾಯಿ. ಮಗುವಿನ ಆರೈಕೆಗಾಗಿ ತನ್ನೆಲ್ಲಾ ಸರ್ವಸ್ವವನ್ನು ಮುಡಿಪಾಗಿಡುತ್ತಾಳೆ. ತನ್ನ ಕರುಳಿನ ಕುಡಿಗೆ ಸಣ್ಣ ಕೆಡುಕಾಗದಂತೆ ಜೋಪಾನ ಮಾಡುತ್ತಾಳೆ’ ಎಂದು ತಿಳಿಸಿದರು.
ತಾಯಂದಿರ ದಿನಾಚರಣೆ ಪ್ರಯುಕ್ತ ಪತ್ರಿಕೋದ್ಯಮದ ಸಾಧಕರು, ಕ್ರೀಡಾ ಸಾಧಕರು ಸೇರಿದಂತೆ ವಿವಿಧ ಕ್ಷೇತ್ರದ ಸಾಧಕಿಯರನ್ನು ಮತ್ತು ಗರ್ಭಿಣಿಯರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಾನಂದೂರು ಕೆಂಪಯ್ಯ, ಮಾಯಾ ಫೌಂಡೇಶನ್‌ನ ಸಂಸ್ಥಾಪಕಿ ರಮ್ಯಾ ಎಂ.ಕೆ., ಪರಿವರ್ತನಂ ಟ್ರಸ್ಟ್ ಸಂಸ್ಥಾಪಕ ವಿನೋದ್ ಚೆನ್ನಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಶರವಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.