ADVERTISEMENT

ಉದ್ಯೋಗಾವಕಾಶ ಹೆಚ್ಚಿಸಿದ ತಂತ್ರಜ್ಞಾನ ಕ್ಷೇತ್ರ

ವಿಜ್ಞಾನಿ ಡಾ.ವಿ.ಕೆ.ಅತ್ರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 20:21 IST
Last Updated 8 ಡಿಸೆಂಬರ್ 2022, 20:21 IST

ಬೆಂಗಳೂರು: ತಂತ್ರಜ್ಞಾನದ ಬೆಳವಣಿಗೆಯಿಂದ ಉದ್ಯೋಗವಕಾಶಗಳು ಹೆಚ್ಚಾಗಿವೆ. ಭಾರತ ಇಂದು ಉತ್ಪನ್ನಗಳನ್ನು ರಫ್ತು ಮಾಡುವಷ್ಟು ಸ್ವಾವಲಂಬನೆ ಸಾಧಿಸಿದೆ ಎಂದು ವಿಜ್ಞಾನಿ ಡಾ.ವಿ.ಕೆ.ಅತ್ರೆ ಹೇಳಿದರು.

ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಅಮೆರಿಕನ್ ಸೊಸೈಟಿ ಆಫ್ ಮೆಕಾನಿಕಲ್ ಎಂಜಿನಿಯರ್ಸ್‌ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಎಎಸ್‍ಎಂಜಿ ಇಂಡಿಯಾ ಎಎಂ 3ಡಿ ಏರೋ-2022’ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳೆದಂತೆ ಹೂಡಿಕೆ, ಉದ್ಯೋಗವಕಾಶಗಳು ಹೆಚ್ಚಾಗಿವೆ. ಇದರಿಂದ ಮೇಕ್ ಇನ್ ಇಂಡಿಯಾ ಸಾಧ್ಯವಾಗಿದೆ. ಬಹುತೇಕ ಉತ್ಪಾದನೆಗಳು ಭಾರತದಲ್ಲೇ ಸಿದ್ಧವಾಗುತ್ತಿವೆ. ಇದರಿಂದ ಸ್ವದೇಶಿ ನಿರ್ಮಿತ ಎಲ್‍ಸಿಎಚ್ ರೂಪಿಸಿದ್ದೇವೆ ಎಂದರು.

ADVERTISEMENT

‘ಸಂಶೋಧನೆಗಳು ಕಾಗದಗಳಲ್ಲೇ ಉಳಿಯಬಾರದು. ಕಾರ್ಯರೂಪಕ್ಕೆ ಬಂದಾಗ ಹೊಸ ಆವಿಷ್ಕಾರ ಸಾಧ್ಯ. ವಿದ್ಯಾರ್ಥಿಗಳು ವೈಮಾನಿಕ ಕ್ಷೇತ್ರದ ಕಡೆಗೂ ಆಲೋಚಿಸಬೇಕು’ ಎಂದರು.

ಆಧುನಿಕ ತಂತ್ರಜ್ಞಾನ ಸಾಧನಗಳನ್ನು ಬಳಸಿಕೊಂಡು ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಗುಣಮಟ್ಟ, ಕ್ರೀಯಾಶೀಲತೆ ಕಾರ್ಯಕ್ಷಮತೆ ಸಾಧಿಸುವಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಯುವ ಜನರ ಪ್ರತಿಭೆ ಗುರುತಿಸಿ ನಮ್ಮಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಪ್ರತಿಭಾ ಪಲಾಯನ ತಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬೋಯಿಂಗ್ ಅಡೆಕ್ಟೀವ್ ಮ್ಯಾನಿಫ್ಯಾಕ್ಚರಿಂಗ್ ಉಪಾಧ್ಯಕ್ಷ ಡಾ.ಮಿಲೆಸ್ಸಾ ಓರ್ಮಿ ಮಾತನಾಡಿದರು. ಬೋಯಿಂಗ್ ಕಂಪನಿ ಉಪಾಧ್ಯಕ್ಷ ಸ್ಟೀವ್‌ ಚಿಶೋಲಂ, ಎಎಸ್‍ಎಂಇ ಸಿಇಒ ಥಾಮಸ್ ಕೋಸ್ಟಬೇಲ್, ಗೋಕುಲ ಎಜುಕೇಷನ್ ಫೌಂಡೇಷನ್ಉಪಾಧ್ಯಕ್ಷ ಎಂ.ಆರ್.ಸೀತಾರಂ, ಕಾರ್ಯದರ್ಶಿ ಎಂ.ಆರ್.ರಾಮಯ್ಯ, ಪ್ರಾಂಶುಪಾಲ ಡಾ.ಎನ್.ವಿ.ಆರ್. ನಾಯ್ಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.