ADVERTISEMENT

ಬೆಂಗಳೂರು | ಎಂಎಸ್ಆರ್‌ಐಟಿಯಲ್ಲಿ ಪ್ರಾಜೆಕ್ಟ್‌ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಮೇ 2024, 16:12 IST
Last Updated 16 ಮೇ 2024, 16:12 IST
ಎಂಎಸ್ಆರ್‌ಐಟಿಯಲ್ಲಿ ಗುರುವಾರ ನಡೆದ ‘ಪ್ರಾಜೆಕ್ಟ್‌ ಪ್ರದರ್ಶನ 2024‘ರಲ್ಲಿ ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ. ಎಂ.ಆರ್. ಸೀತಾರಾಂ  ಪ್ರದರ್ಶನದಲ್ಲಿಟ್ಟದ್ದ ಪ್ರಾಜೆಕ್ಟ್‌ ಕುರಿತು ವಿದ್ಯಾರ್ಥಿನಿಯೊಬ್ಬರಿಂದ ಮಾಹಿತಿ ಪಡೆದರು.
ಎಂಎಸ್ಆರ್‌ಐಟಿಯಲ್ಲಿ ಗುರುವಾರ ನಡೆದ ‘ಪ್ರಾಜೆಕ್ಟ್‌ ಪ್ರದರ್ಶನ 2024‘ರಲ್ಲಿ ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ. ಎಂ.ಆರ್. ಸೀತಾರಾಂ  ಪ್ರದರ್ಶನದಲ್ಲಿಟ್ಟದ್ದ ಪ್ರಾಜೆಕ್ಟ್‌ ಕುರಿತು ವಿದ್ಯಾರ್ಥಿನಿಯೊಬ್ಬರಿಂದ ಮಾಹಿತಿ ಪಡೆದರು.   

ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಪ್ರಾಜೆಕ್ಟ್ ಪ್ರದರ್ಶನ –2024’‌ಕ್ಕೆ ಗುರುವಾರ ಚಾಲನೆ ದೊರೆಯಿತು.

ಸ್ಯಾಮ್ ಸಂಗ್ ಇಂಡಸ್ಟ್ರಿ (ಆರ್ ಆ್ಯಂಡ್‌ ಡಿ) ವಿಭಾಗದ ಮುಖ್ಯ ನಿರ್ದೇಶಕ ಲೋಕೇಶ್‌ ಆರ್‌. ಬೋರೇಗೌಡ ಮತ್ತು ಗೋಕುಲ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ.ಎಂ.ಆರ್. ಸೀತಾರಾಂ ಪ್ರದರ್ಶನ ಉದ್ಘಾಟಿಸಿದರು.

ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು. ಒಟ್ಟು 1400 ಪ್ರಾಜೆಕ್ಟ್ ಗಳು ಬಂದಿದ್ದು, ಈ ಪೈಕಿ 13 ಎಂಜಿನಿಯರಿಂಗ್ ವಿಭಾಗದಿಂದ 387 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಯಿತು.

ADVERTISEMENT

ಲೋಕೇಶ್ ಆರ್.ಬೋರೇಗೌಡ ಮಾತನಾಡಿ, ‘ವಿದ್ಯಾರ್ಥಿಗಳಿಗೆ ತಮ್ಮ ಪರಿಕಲ್ಪನೆಗಳ ಆವಿಷ್ಕಾರ ಗಳನ್ನು ಪ್ರದರ್ಶಿಸಲು ‘ಪ್ರಾಜೆಕ್ಟ್‌ ಪ್ರದರ್ಶನ‘ ಉತ್ತಮ ವೇದಿಕೆ ಒದಗಿಸಿದೆ‘ ಎಂದು ಹೇಳಿದರು.

ಡಾ.ಎಂ.ಆರ್. ಸೀತಾರಾಂ ಮಾತನಾಡಿ, ‘ಪ್ರತಿ ವರ್ಷ ಈ ಪ್ರದರ್ಶನ ಆಯೋಜಿಸುತ್ತೇವೆ. ವಿದ್ಯಾರ್ಥಿಗಳು ತಾವು ತಯಾರಿಸಿದ ಪ್ರಾಜೆಕ್ಟ್‌ಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಪ್ರದರ್ಶನದಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾದ ಪ್ರಾಜೆಕ್ಟ್‌ಗಳಿವೆ‘ ಎಂದರು.

ಗೋಕುಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್, ಗೋಕುಲ ಶಿಕ್ಷಣಸಂಸ್ಥೆ ನಿರ್ದೇಶಕ ಎಂ.ಆರ್.ರಾಮಯ್ಯ, ಕಾರ್ಯದರ್ಶಿ ಬಿ.ಎಸ್.ರಾಮಪ್ರಸಾದ್, ಪ್ರಾಚಾರ್ಯ ಎನ್.ವಿ.ಆರ್.ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.