ADVERTISEMENT

ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ದೇವಶೆಟ್ಟಿ ಗೌಡ ನಿಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 15:47 IST
Last Updated 23 ಫೆಬ್ರುವರಿ 2026, 15:47 IST
<div class="paragraphs"><p>ದೇವಶೆಟ್ಟಿ ಗೌಡ</p></div>

ದೇವಶೆಟ್ಟಿ ಗೌಡ

   

ಬೆಂಗಳೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ, ನಿವೃತ್ತ ಅಧಿಕಾರಿ ಎಂ.ವಿ.ದೇವಶೆಟ್ಟಿಗೌಡ (84) ಅವರು ಸೋಮವಾರ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ.

ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಫೆ.24ರಂದು ಬೆಳಿಗ್ಗೆ 8ರವರೆಗೆ ನಾಗರಬಾವಿಯಲ್ಲಿರುವ ನಿವಾಸದಲ್ಲಿ(ನಂ.183, 2ನೇ ಜೆ ಮೇನ್, 11ನೇ ಬ್ಲಾಕ್, 2ನೇ ಹಂತ, ನಾಗರಬಾವಿ ಕ್ಲಬ್ ಹತ್ತಿರ) ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಬೆಳಿಗ್ಗೆ 11ಕ್ಕೆ ಮಂಡ್ಯ ತಾಲ್ಲೂಕು ಕೆರಗೋಡು ಹೋಬಳಿ ಹಂಚಲಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾಜಿ ಕಾರ್ಯದರ್ಶಿಯಾಗಿ ‌18 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಕರ್ನಾಟಕ ಸರ್ಕಾರಿ ಸಚಿವಾಲಯ ಸೇವೆಗೆ ಸೇರಿದ್ದರು. ವೈ ಕೆ ರಾಮಯ್ಯ, ಎಚ್ ಟಿ ಕೃಷ್ಣಪ್ಪ, ಗೋವಿಂದೇಗೌಡ ಮತ್ತು ಕೆ ಎನ್ ನಾಗೇಗೌಡ ಸೇರಿದಂತೆ ವಿವಿಧ ಸಚಿವರಿಗೆ OSD (ವಿಶೇಷ ಕರ್ತವ್ಯ ಅಧಿಕಾರಿ) ವಿಶ್ವಾಸಾರ್ಹ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರದ ವರ್ಷಗಳಲ್ಲಿಯೂ ಸಹ, ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು ವಿವಿಧ ಕನ್ನಡ ಸಂಘಟನೆಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದರು. ಮೃತರಿಗೆ 3 ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಪತ್ನಿ ಶಾಂತಾ ಕೂಡ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಫೆ.24 ಬೆಳಿಗ್ಗೆ 9.30 ರವರೆಗೆ ನಾಗರಬಾವಿಯ ಸ್ವಗೃಹದಲ್ಲಿ ಇರಿಸಲಾಗುವುದು.ಅಂತ್ಯಕ್ರಿಯೆಯನ್ನು ಮಧ್ಯಾಹ್ನ 2.30 ಗಂಟೆಗೆ ಮಂಡ್ಯ ಜಿಲ್ಲೆಯ ಕೆರಗೋಡು ಹೋಬಳಿಯ ಹಂಚಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಎಂ.ವಿ.ದೇವಶೆಟ್ಟಿ ಗೌಡ ಅವರ ಕುಟುಂಬದ ಆಪ್ತ ವಲಯ ತಿಳಿಸಿದೆ. ಎಂ.ವಿ.ದೇವಶೆಟ್ಟಿ ಗೌಡ ಅವರ ನಿಧನದ ಸುದ್ದಿ ಕೇಳಿ ಅಪಾರ ಬಂಧುಗಳು ವಿವಿಧ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.