ADVERTISEMENT

ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 14:52 IST
Last Updated 14 ನವೆಂಬರ್ 2025, 14:52 IST
Venugopala K.
   Venugopala K.

ಬೆಂಗಳೂರು: ‘ಆಡಳಿತಾತ್ಮಕ ದೃಷ್ಟಿಯಿಂದ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳನ್ನು ಒಳಗೊಂಡು ಪ್ರತ್ಯೇಕ ಮೈಸೂರು ರಾಜ್ಯ ರಚನೆ ಮಾಡಬೇಕು’ ಎಂದು ಮೈಸೂರು ರಾಜ್ಯ ರಚನಾ ಒತ್ತಾಯ ಸಮಿತಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದೆ. 

‘ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೂ ಮುನ್ನ, 2028ರೊಳಗೆ ಕ್ಷೇತ್ರಗಳ ಮರುವಿಂಗಡಣೆ ಮಾಡಬೇಕಿದೆ. ಈ ಪ್ರಕ್ರಿಯೆಗೂ ಮೊದಲೇ ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ಆ ದೃಷ್ಟಿಯಿಂದ ರಾಜ್ಯದ ಎಲ್ಲ ಪಕ್ಷಗಳ ನಾಯಕರು ಒಮ್ಮತದಿಂದ ನಿರ್ಣಯಕ್ಕೆ ಬರಬೇಕು’ ಎಂದು ಸಮಿತಿಯ ರಾಜ್ಯಾಧ್ಯಕ್ಷ ಮರಿಮಲ್ಲಯ್ಯ ಹೇಳಿದ್ದಾರೆ.

‘ಕರ್ನಾಟಕ ಅತಿದೊಡ್ಡ ರಾಜ್ಯವಾದ್ದರಿಂದ, ಎಲ್ಲ ಪ್ರಾಂತಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ನಾಡಿನ ಸಮತೋಲನ ಆಡಳಿತ ದೃಷ್ಟಿಯಿಂದ ಪ್ರತ್ಯೇಕ ರಾಜ್ಯಗಳನ್ನು ರಚಿಸುವುದು ಸೂಕ್ತ. ಮೈಸೂರು, ಮಂಡ್ಯ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಉತ್ತರ ಕನ್ನಡವನ್ನು ಒಳಗೊಂಡು ಮೈಸೂರು ರಾಜ್ಯ ರಚಿಸಬೇಕಿದೆ. ಇದರಿಂದ ಉಳಿದ ಪ್ರದೇಶಗಳ ಅಭಿವೃದ್ಧಿಗೂ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು ಸಾಧ್ಯ’ ಎಂದಿದ್ದಾರೆ.

ADVERTISEMENT

‘ಜನಸಂಖ್ಯೆ ಪ್ರಕಾರ ಆಡಳಿತದ ದೃಷ್ಟಿಯಿಂದ ತಲಾ 3.5 ಕೋಟಿ ಜನರಿಗೆ ಅನ್ವಯವಾಗುವಂತೆ ರಾಜ್ಯವನ್ನು ರಚಿಸುವುದು ಸೂಕ್ತ. ಜನಪ್ರತಿನಿಧಿಗಳು, ಪ್ರಜ್ಞಾವಂತರು, ಸಾಹಿತಿಗಳು ಈ ಬಗ್ಗೆ ಚಿಂತಿಸಲು ಇದು ಸಕಾಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.