ADVERTISEMENT

‘ನಮ್ಮ ಕ್ಲಿನಿಕ್’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:38 IST
Last Updated 6 ಮಾರ್ಚ್ 2023, 20:38 IST
ಯಶವಂತಪುರದ ಕಮಲಾ ನೆಹರು ಬಡಾವಣೆ ತ್ರಿವೇಣಿ ರಸ್ತೆಯ 6ನೇ ಕ್ರಾಸ್‌ನಲ್ಲಿ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಅನ್ನು ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಉದ್ಘಾಟಿಸಿದರು
ಯಶವಂತಪುರದ ಕಮಲಾ ನೆಹರು ಬಡಾವಣೆ ತ್ರಿವೇಣಿ ರಸ್ತೆಯ 6ನೇ ಕ್ರಾಸ್‌ನಲ್ಲಿ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಅನ್ನು ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಉದ್ಘಾಟಿಸಿದರು   

ಬೆಂಗಳೂರು: ‘ಜನರ ಉತ್ತಮ ಆರೋಗ್ಯಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸುಧಾರಿತ ವ್ಯವಸ್ಥೆಗಳನ್ನು ನಿರ್ಮಿಸಲು ಸರ್ಕಾರ ಒತ್ತು ನೀಡಿದೆ’ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಯಶವಂತಪುರದ ಕಮಲಾ ನೆಹರು ಬಡಾವಣೆ ತ್ರಿವೇಣಿ ರಸ್ತೆ 6ನೇ ಕ್ರಾಸ್‌ನಲ್ಲಿ ಸ್ಥಾಪಿಸಿರುವ ‘ನಮ್ಮ ಕ್ಲಿನಿಕ್’ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮಲ್ಲೇಶ್ವರ ಕ್ಷೇತ್ರದ ಏಳು ವಾರ್ಡ್‌ ಗಳಲ್ಲೂ ತಲಾ ಒಂದು ‘ನಮ್ಮ ಕ್ಲಿನಿಕ್’ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಈ 14 ಕೇಂದ್ರಗಳ ಪೈಕಿ 13 ಕೇಂದ್ರ ಗಳನ್ನು ಸರ್ಕಾರಕ್ಕೆ ಸೇರಿದ ಕಟ್ಟಡಗಳಲ್ಲಿಯೇ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೊದಲು 350 ಬೆಡ್ ಇತ್ತು. ಈಗ ಅದನ್ನು 650 ಬೆಡ್‌ಗಳಿಗೆ ಹೆಚ್ಚಿಸಲಾಗಿದೆ. ಟ್ರಾಮಾ ಸೆಂಟರ್ ಕೂಡ ಇದೆ ಎಂದರು.

ಜೈಪಾಲ್, ಚೌಧರಿ, ಅರವಿಂದ್, ಅಲಿ, ಡಾ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.