ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲೇ? ಎಷ್ಟು ನಿಮಿಷಕ್ಕೊಂದು ಟ್ರಿಪ್?
ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲೇ? ಎಷ್ಟು ನಿಮಿಷಕ್ಕೊಂದು ಟ್ರಿಪ್?
ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೊ ಹಳದಿ ಮಾರ್ಗದ ವಾಣಿಜ್ಯ ಸಂಚಾರ ಇನ್ನೇನು ಶುರುವಾಗಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನೆಗೆ ಬಿಎಂಆರ್‌ಸಿಎಲ್ ಈಗಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದು ಈ ಮಾರ್ಗದಲ್ಲಿ ಸಂಚರಿಸಲು ಬೆಂಗಳೂರು ಜನ ಕಾತರರಾಗಿದ್ದಾರೆ. ಅಲ್ಲದೇ ಎಷ್ಟು ನಿಮಿಷಕ್ಕೊಂದು ರೈಲು ಟ್ರಿಪ್ ಇರಲಿದೆ? ಇದು ಚಾಲಕ ರಹಿತ ರೈಲೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಇಲ್ಲಿದೆ ಉತ್ತರ
ಸದ್ಯ ಚಾಲಕ ಸಹಿತ ಸಂಚಾರ
ಹಳದಿ ಮಾರ್ಗದಲ್ಲಿ ಸಂಚರಿಸಲು ಚಾಲಕ ರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ (ಮೂಲ ಮಾದರಿ) ಮೂರು ರೈಲುಗಳು ಈಗಾಗಲೇ ಬಂದಿವೆ. ಆದರೆ, ಪ್ರಧಾನಿ ಚಾಲನೆ ನೀಡಿದ ಬಳಿಕ ಚಾಲಕ ಸಹಿತ ಸಂಚಾರ ನಡೆಸಲಿವೆ.
‘ನಮ್ಮ ಮೆಟ್ರೊ’ ಇತರ ಮಾರ್ಗಗಳಲ್ಲಿ ‘ಡಿಸ್ಟೆನ್ಸ್ ಟು ಗೊ’ (ಡಿಟಿಜಿ) ವ್ಯವಸ್ಥೆಯ ಲೋಕೊ ಪೈಲಟ್ ಮೆಟ್ರೊಗಳೇ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಮಾತ್ರ ಚಾಲಕ ರಹಿತ ರೈಲು ಸಂಚರಿಸಲು, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗಿದೆ. ಆರಂಭದಲ್ಲಿ ಲೋಕೊ ಪೈಲಟ್‌ಗಳನ್ನು (ಚಾಲಕರನ್ನು) ನಿಯೋಜಿಸಲಾಗುವುದು. ಯಾವುದೇ ಸಮಸ್ಯೆ ಉಂಟಾಗದಿರುವುದು ಖಾತ್ರಿಯಾದ ಮೇಲೆ ಲೋಕೊ ಪೈಲಟ್‌ಗಳಿಲ್ಲದೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಪ್ರತಿ 25 ನಿಮಿಷಕ್ಕೊಂದು ಟ್ರಿಪ್ ಇರಲಿದೆ. ನಾಲ್ಕನೇ ರೈಲು ಬಂದ ಮೇಲೆ ಟ್ರಿಪ್ ಅವಧಿ ತಗ್ಗಲಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.