ADVERTISEMENT

ಅಪಾರ್ಟ್‌ಮೆಂಟ್‌ಗಳ ಬಳಿ ನಂದಿನಿ ಪಾರ್ಲರ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 20:35 IST
Last Updated 19 ಜೂನ್ 2020, 20:35 IST
ಜಯನಗರದ 9ನೇ ಬ್ಲಾಕ್‌ನಲ್ಲಿ ನಂದಿನಿ ಕೆಫೆ ಮೂ ಹೆಸರಿನ ಹವಾ ನಿಯಂತ್ರಿತ ಐಸ್‍ಕ್ರೀಂ ಸ್ಕೂಪಿಂಗ್ ಸಹಿತ ಪಾರ್ಲರ್ ಅನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಉದ್ಘಾಟಿಸಿದರು. ನಿರ್ದೇಶಕ(ಮಾರುಕಟ್ಟೆ) ಎಂ.ಟಿ. ಕುಲಕರ್ಣಿ, ನಿರ್ದೇಶಕ (ಸ್ಟೆಪ್) ಮಂಜುನಾಥ್, ನಿರ್ದೇಶಕ(ಮದರ್ ಡೇರಿ) ಸುರೇಶ್ ಇದ್ದರು

ಬೆಂಗಳೂರು: ನಗರದ 100 ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬಳಿ ನಂದಿನಿ ಪಾರ್ಲರ್‌ಗಳ ನಿರ್ಮಾಣಕ್ಕೆ ಕೆಎಂಎಫ್‌ ಯೋಜನೆ ರೂಪಿಸಿದೆ.

‘ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಈ ಪಾರ್ಲರ್‌ಗಳು ನಿರ್ಮಾಣವಾಗಲಿವೆ.ಎರಡನೇ ಹಂತದ ನಗರಗಳಿಗೂ ಮುಂದಿನ ದಿನಗಳಲ್ಲಿ ಇವು ವಿಸ್ತರಣೆಯಾಗಲಿವೆ’ ಎಂದು ಕೆಎಂಎಫ್‌ ತಿಳಿಸಿದೆ.

ಐಟಿ ಸಂಸ್ಥೆಗಳು, ಕಾಲೇಜು ಗಳು,ವಿಶ್ವವಿದ್ಯಾಲಯಗಳಕ್ಯಾಂಪಸ್‍ಗಳಲ್ಲಿ 25 ನಂದಿನಿ ಪಾರ್ಲರ್‌ಗಳನ್ನು ನಿರ್ಮಾಣ ಮಾಡಲಾಗುವುದು.

ADVERTISEMENT

‘ನಂದಿನಿ ಉತ್ಪನ್ನಗಳ ಖರೀದಿಗೆ ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.