ADVERTISEMENT

ನಾರಾಯಣಗುರು ನಿಗಮ ಸ್ಥಾಪನೆಗೆ ಒಲವು: ಸಚಿವ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 18:36 IST
Last Updated 22 ಸೆಪ್ಟೆಂಬರ್ 2019, 18:36 IST
ನಾರಾಯಣಗುರು ಹಾಗೂ ಕೋಟಿ–ಚೆನ್ನಯರ ಭಾವಚಿತ್ರಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಪುಷ್ಪ ನಮನ ಸಲ್ಲಿಸಿದರು. ಬಿ.ಕೆ.ಹರಿಪ್ರಸಾದ್‌, ನಟ ಸುಮನ್‌, ಸಂಸದ ಮಾರಗಾನಿ ಭರತ್‌, ಭೀಮಾಶಂಕರ ಸ್ವಾಮೀಜಿ , ಮಾಲೀಕಯ್ಯ ಗುತ್ತೇದಾರ್‌, ಗುರುಕೃಪಾ ಆಶ್ರಮದ ವಿಖ್ಯಾತಾನಂದ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ
ನಾರಾಯಣಗುರು ಹಾಗೂ ಕೋಟಿ–ಚೆನ್ನಯರ ಭಾವಚಿತ್ರಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಪುಷ್ಪ ನಮನ ಸಲ್ಲಿಸಿದರು. ಬಿ.ಕೆ.ಹರಿಪ್ರಸಾದ್‌, ನಟ ಸುಮನ್‌, ಸಂಸದ ಮಾರಗಾನಿ ಭರತ್‌, ಭೀಮಾಶಂಕರ ಸ್ವಾಮೀಜಿ , ಮಾಲೀಕಯ್ಯ ಗುತ್ತೇದಾರ್‌, ಗುರುಕೃಪಾ ಆಶ್ರಮದ ವಿಖ್ಯಾತಾನಂದ ಸ್ವಾಮೀಜಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಈಡಿಗ ಸಮಾಜದ 26 ಉಪಜಾತಿಗಳನ್ನು ಒಳಗೊಂಡಂತೆ ಸಮುದಾಯದ ಅಭಿವೃದ್ಧಿಗಾಗಿ ನಾರಾಯಣಗುರು ಅವರ ಹೆಸರಿನಲ್ಲಿ ನಿಗಮ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದು ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ’ ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ನಾರಾಯಣಗುರು ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌, ‘ಸಮುದಾಯದ ಹೊಟ್ಟೆಪಾಡಿಗಾಗಿ ಮೀಸಲಾತಿ ಅವಶ್ಯಕತೆ ಇಲ್ಲ. ಸಮುದಾಯದ ಅಭಿವೃದ್ಧಿಗಾಗಿ ಅಗತ್ಯವಿದೆ.ಮುಸಲ್ಮಾನರಿಗೂ ನಮ್ಮ ಸಮುದಾಯದವರಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಸಮುದಾಯದವರು ಶ್ರಮದಿಂದ ಕೆಲಸ ಮಾಡಿ ಜೀವನ ಕಟ್ಟಿಕೊಳ್ಳುತ್ತಾರೆ. ಸರ್ಕಾರಿ ಕೆಲಸ ಅರಸಿ ಹೋಗುವುದಿಲ್ಲ’ ಎಂದರು.

ADVERTISEMENT

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ‘ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.ಸಂಘದ ವತಿಯಿಂದ ‘ನಾರಾಯಣಗುರು ಕೋ ಆಪರೇಟಿವ್‌ ಸೊಸೈಟಿ’ಗೆ ಹಾಗೂ ಜಾತಿಗಣತಿಗೆ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.