ADVERTISEMENT

ನಾಟಕ ಸ್ಪರ್ಧೆ: ನಾಲ್ವರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:09 IST
Last Updated 24 ಮಾರ್ಚ್ 2019, 20:09 IST

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ಈ ಸಾಲಿನ ನಾಟಕ ರಚನಾ ಸ್ಪರ್ಧೆಯ ಬಹುಮಾನಕ್ಕೆ ನಾಲ್ಕು ನಾಟಕಗಳನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಎನ್.ಸಿ.ಮಹೇಶ ಬರೆದಿರುವ ‘ಸಾಕುತಂದೆ ರೂಮಿ’, ನಟರಾಜ್ ತಲಘಟ್ಟಪುರ ಅವರ ‘ಬಯಲರೂಪ’, ಉಷಾ ಕಟ್ಟೆಮನೆ ಅವರ ‘ಕೋಡ್ದಬ್ಬ ತನ್ನಿಮಾನಿಗ’ ಮತ್ತು ವಿದ್ಯಾರ್ಥಿ ವಿಭಾಗದಲ್ಲಿ ಕುಪ್ಪಳ್ಳಿಯ ನಮನ ಬಿ.ಎನ್. ಅವರ ‘ನಡುವೆ ಸುಳಿವಾತ್ಮ’ ನಾಟಕ ಬಹುಮಾನಕ್ಕೆ ಆಯ್ಕೆಯಾಗಿದೆ.

ತಲಾ ₹20,000 ಬಹುಮಾನ ಇದಾಗಿದ್ದು, ವಿಶ್ವರಂಗಭೂಮಿ ದಿನವಾದ ಇದೇ 27ರಂದು ಸಂಜೆ 6ಕ್ಕೆ ನಯನ ಸಭಾಂಗಣದಲ್ಲಿ ಬಹುಮಾನ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಜಿ. ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.