ಬೆಂಗಳೂರು: ‘2018ನೇ ಸಾಲಿನಲ್ಲಿ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿರುವ ಕನ್ನಡದ ‘ನಾತಿಚರಾಮಿ’ ಚಲನಚಿತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಬಾರದು’ ಎಂದು ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ನೀಡಿದೆ.
ಈ ಕುರಿತಂತೆ ಸಿನಿಮಾ ನಿರ್ದೇಶಕ ದಯಾಳ್ ಪದ್ಮನಾಭನ್ ಸಲ್ಲಿಸಿರುವ ದಾವೆಯನ್ನು 5ನೇ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸಿ.ಡಿ.ಕರೋಷಿ ವಿಚಾರಣೆ ನಡೆಸಿದರು. ವಿಚಾರಣೆಯನ್ನು 2020ರ ಜನವರಿ 10ಕ್ಕೆ ಮುಂದೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.