ADVERTISEMENT

‘ಸ್ಥಳೀಯರಿಗೆ ಟಿಕೆಟ್‌ ನೀಡಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:22 IST
Last Updated 9 ಏಪ್ರಿಲ್ 2022, 20:22 IST
ನೆಲಮಂಗಲದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಬೂದಿಹಾಳ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು, ವರದ ನಾಯಕನ ಹಳ್ಳಿ ನಾಗರಾಜು, ಮಾಲ್ಗೂರು ರೇಣುಕಪ್ಪ, ಗಂಗರುದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಾಥ ಬಾಬು, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಯೋಗೇಶ್ ಗೌಡ ಇದ್ದಾರೆ.
ನೆಲಮಂಗಲದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಣ್ಣ ಮಾತನಾಡಿದರು. ಬೂದಿಹಾಳ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು, ವರದ ನಾಯಕನ ಹಳ್ಳಿ ನಾಗರಾಜು, ಮಾಲ್ಗೂರು ರೇಣುಕಪ್ಪ, ಗಂಗರುದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಂಗನಾಥ ಬಾಬು, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಯೋಗೇಶ್ ಗೌಡ ಇದ್ದಾರೆ.   

ನೆಲಮಂಗಲ: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದಲ್ಲಿನಒಕ್ಕಲಿಗ ಮುಖಂಡರು ಆಗ್ರಹಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಶಿವಣ್ಣ, ‘ಅಭ್ಯರ್ಥಿ ವಿಚಾರದಲ್ಲಿ ಹಲವು ಗೊಂದಲ ಸೃಷ್ಟಿಯಾಗುವ ಮೊದಲೇ ವರಿಷ್ಠರು ನಿರ್ಧಾರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

‘ಈ ಹಿಂದೆ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ, ಕಳೆದ ಮೂರು ಚುನಾವಣೆಯಲ್ಲಿ ಪರಾಭವಗೊಂಡಿ
ದ್ದೇವೆ. ಹಣಬಲವೊಂದನ್ನೇ ನೋಡಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿರುವುದು ಮತ್ತು ಕೆಲವರು ಮುಖಂಡರನ್ನು ಓಲೈಸಿ ಗೊಂದಲ ಸೃಷ್ಟಿಸುತ್ತಿರುವುದು ಇದಕ್ಕೆ ಕಾರಣ. ಸ್ಥಳೀಯವಾಗಿ ಕ್ಷೇತ್ರದ ಮುಖಂಡರ, ಸಮಸ್ಯೆಗಳ ಮತ್ತು ಗ್ರಾಮಗಳ ಪರಿಚಯ
ವಿರುವ ಅಭ್ಯರ್ಥಿಯನ್ನು ಆಯ್ಕೆಮಾ
ಡಬೇಕು’ ಎಂದರು. ‘ಮಾಜಿ ಸಚಿವ ಅಂಜನಾಮೂರ್ತಿ, ಕೋವಿಡ್ ಸಂದರ್ಭ
ದಲ್ಲಿ ಉಚಿತ ಆಂಬುಲೆನ್ಸ್ ಹಾಗೂ ಇತರೆ ಸೇವೆ ಒದಗಿಸಿದ ಸಪ್ತಗಿರಿ ಶಂಕರ
ನಾಯಕ್, ಎಚ್.ಪಿ. ಚೆಲುವರಾಜು, ವಕೀಲ ಕಾರೆಹಳ್ಳಿ ವೆಂಕಟರಾಮು, ಕೃಷ್ಣ
ಮೂರ್ತಿ, ಮುಮ್ಮೆನಹಳ್ಳಿ ಜಯರಾಮ್ ಇವರಲ್ಲಿ ಯಾರಿಗಾದರೂ ಟಿಕೆಟ್ ನೀಡಿ
ದರೆ ಗೆಲುವು ಸುಲಭ‌. ಹೊರಗಿನವರಿಗೆ ನೀಡಿದರೆ ಕೆಲಸ ಮಾಡಲು ಉತ್ಸಾಹ ಇಲ್ಲದಂತಾಗುತ್ತದೆ’ ಎಂದರು.

ADVERTISEMENT

‘ಒಕ್ಕಲಿಗರು ಕೇವಲ ಜೆಡಿಎಸ್‌ನಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಬೆರಳಣಿಕೆ ಮಂದಿ ಇದ್ದಾರೆ ಎನ್ನುವ ತಪ್ಪು ಭಾವನೆ ಜನರಲ್ಲಿದೆ. ಒಕ್ಕಲಿಗರು ಕಾಂಗ್ರೆಸ್‌ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.