ADVERTISEMENT

ಅಪರಾಧಗಳಲ್ಲಿ ಭಾಗಿಯಾಗಬೇಡಿ: ಬೆಂಗಳೂರು ಗ್ರಾಮಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 23:06 IST
Last Updated 3 ಆಗಸ್ಟ್ 2021, 23:06 IST
ಕೋನ ವಂಶಿ ಕೃಷ್ಣ ಅವರು ರೌಡಿಗಳಿಂದ ವಿವರಣೆ ಪಡೆದರು. ಇನ್ಸ್‌ಪೆಕ್ಟರ್‌ ಎ.ವಿ.ಕುಮಾರ್‌ ಹಾಗೂ ಸಿಬ್ಬಂದಿ ಇದ್ದರು.
ಕೋನ ವಂಶಿ ಕೃಷ್ಣ ಅವರು ರೌಡಿಗಳಿಂದ ವಿವರಣೆ ಪಡೆದರು. ಇನ್ಸ್‌ಪೆಕ್ಟರ್‌ ಎ.ವಿ.ಕುಮಾರ್‌ ಹಾಗೂ ಸಿಬ್ಬಂದಿ ಇದ್ದರು.   

ನೆಲಮಂಗಲ: ‘ಹಿಂದೆ ಮಾಡಿರುವ ಅಪರಾಧಗಳನ್ನು ಮುಂದುವರಿಸಬೇಡಿ. ಒಳ್ಳೆಯ ನಾಳೆಗಳಿಗೆ ಸರಿಯಾದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಕುಟುಂಬದ ಕಡೆ ಗಮನ ಕೊಡಿ’ ಎಂದುಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ರೌಡಿಗಳಿಗೆ ಕಿವಿಮಾತು ಹೇಳಿದರು.

ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ರೌಡಿಗಳ ಪರೇಡ್‌ನಲ್ಲಿ ಅವರು ಮಾತನಾಡಿದರು.

‘ಇದನ್ನು ರೌಡಿ ಪರೇಡ್‌ ಅಂದುಕೊಳ್ಳಬೇಡಿ. ಬದಲಾಗಿ ಮನಪರಿವರ್ತನೆಗೆ ಆಪ್ತ ಸಮಾಲೋಚನೆ ಎಂದು ಭಾವಿಸಿ.ಪೊಲೀಸರಿಗೆ ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆ, ಮನೆಯ ವಿಳಾಸ ನೀಡಬೇಕು. ಕರೆದಾಗ ಬರಬೇಕು, ನ್ಯಾಯಾಲಯಗಳಿಗೆ ತಪ್ಪದೇ ಹಾಜರಾಗಬೇಕು. ಯಾವುದೇ ಅಪರಾಧಗಳಲ್ಲಿ ಭಾಗಿಯಾಗಬಾರದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಠಾಣಾ ವ್ಯಾಪ್ತಿಗಳಲ್ಲಿಒಟ್ಟು 354 ರೌಡಿಗಳಿದ್ದು, ಅದರಲ್ಲಿ ಪ್ರಮುಖವಾದ 112 ರೌಡಿಗಳನ್ನು ಪರೇಡ್‌ಗೆ ಕರೆಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.