ADVERTISEMENT

ನೆಲಮಂಗಲ: ನಗರಸಭೆಗೆ ಹೆಚ್ಚುವರಿ ಸದಸ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 14:02 IST
Last Updated 21 ಜನವರಿ 2026, 14:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ನೆಲಮಂಗಲ: ನೆಲಮಂಗಲ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಇದಕ್ಕೆ ಸೇರ್ಪಡೆಯಾಗಿರುವ ಗ್ರಾಮ ಪಂಚಾಯಿತಿಗಳಿಂದ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲಾಗಿದೆ.

ADVERTISEMENT

ಹಾಲಿ ಇರುವ ನಾಮನಿರ್ದೇಶಿತ ಸದಸ್ಯರ ಬದಲಾಗಿ ಹೊಸದಾಗಿ ನೇಮಕ ಮಾಡಲು ಜಿಲ್ಲಾಧಿಕಾರಿಗಳು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ, ವಾಜರಹಳ್ಳಿಯಿಂದ ಬಿ.ಎಸ್‌.ಮುನಿರಾಜು, ಅರಿಶಿನಕುಂಟೆಯಿಂದ ಎಂ.ಲಕ್ಷ್ಮೀನಾರಾಯಣ್‌, ಬಸವನಹಳ್ಳಿಯಿಂದ ಬಿ.ಎನ್‌.ನರಸಿಂಹಮೂರ್ತಿ, ವಿಶ್ವೇಶ್ವರಪುರದಿಂದ ಆರ್‌.ರಂಗಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.