
ನೆಲಮಂಗಲ: ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಯಲಚಗೆರೆ ಹನುಮಂತರಾಜು, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹನುಮಂತರಾಜು ಮಾತನಾಡಿ, ‘ಶಾಸಕ ಎನ್. ಶ್ರೀನಿವಾಸ್, ಮುಖಂಡರಾದ ಗೋವಿಂದರಾಜು, ಹನುಮಂತೇಗೌಡ, ಇತರೆ ಕಾಂಗ್ರೆಸ್ ಮುಖಂಡರು, ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ’ ಎಂದರು.
ನಿರ್ದೇಶಕರಾದ ಬಿ.ಎನ್.ನರಸಿಂಹಮೂರ್ತಿ, ಜಗಜ್ಯೋತಿ ಬಸವೇಶ್ವರ, ಗುರು ಪ್ರಸಾದ್, ನಟರಾಜು, ಶಶಿಧರ್, ಕೇಶವಮೂರ್ತಿ, ನಾಗಭೂಷಣ್, ರಾಜಶೇಖರಯ್ಯ, ಎಂ.ಬಿ.ರಂಗಸ್ವಾಮಿ, ಮರಿಯಪ್ಪ, ಮಂಜುಳ, ಶಾಂತ ಉಪಸ್ಥಿತರಿದ್ದರು. ನಿರ್ದೇಶಕ ಸ್ಥಾನಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.