ADVERTISEMENT

ರೇವಾ ಬಿಜಿನೆಸ್‌ ಸ್ಕೂಲ್‌ನ ಹೊಸ ಬ್ಲಾಕ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:53 IST
Last Updated 28 ಮಾರ್ಚ್ 2023, 19:53 IST
ರೇವಾ ವಿಶ್ವವಿದ್ಯಾಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರನ್ನು ಕುಲಪತಿ ಡಾ. ಪಿ.ಶ್ಯಾಮರಾಜು ಅಭಿನಂದಿಸಿದರು. ಸಂಸದ ತೇಜಸ್ವಿ ಸೂರ್ಯ ಇದ್ದರು
ರೇವಾ ವಿಶ್ವವಿದ್ಯಾಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರನ್ನು ಕುಲಪತಿ ಡಾ. ಪಿ.ಶ್ಯಾಮರಾಜು ಅಭಿನಂದಿಸಿದರು. ಸಂಸದ ತೇಜಸ್ವಿ ಸೂರ್ಯ ಇದ್ದರು   

ಬೆಂಗಳೂರು: ‘ಪ್ರತಿಯೊಬ್ಬರ ಸಂಯೋ ಜಿತ ಕೊಡುಗೆ ದೇಶದ ಒಳಿತಿಗೆ ಶಕ್ತವಾಗುತ್ತದೆ. ಭಾರತದ ಸಂಸ್ಕೃತಿಯ ರಾಯಭಾರಿ ಆಗಲು ಸಾಧ್ಯವಾಗುತ್ತದೆ’ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದರು.

ರೇವಾ ವಿಶ್ವವಿದ್ಯಾಲಯದಲ್ಲಿ ಬಿಜಿನೆಸ್‌ ಸ್ಕೂಲ್‌ನ ಹೊಸಬ್ಲಾಕ್‌ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸ್ಮೃತಿ ಇರಾನಿ, ಯುವ ಪ್ರತಿಭೆಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಮಹಿಳಾ ಕಲ್ಯಾಣದ ಯೋಜನೆಗಳು, ನಿರುದ್ಯೋಗ ನಿವಾರಣೆಗೆ ಕೈಗೊಂಡ ಕ್ರಮಗಳು, ಡಿಜಿಟಲ್‌ ಸಾಕ್ಷರತೆಗೆ ಉತ್ತೇಜನ, ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರು.

ADVERTISEMENT

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ನಾಯಕತ್ವವನ್ನು ನಿರ್ಧರಿಸುವಲ್ಲಿ ನೀವೆಲ್ಲರೂ ಸಕ್ರಿಯ ಪಾಲುದಾರರು. ಹೀಗಾಗಿ, ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಮುಖ್ಯ’ ಎಂದರು.

ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಶ್ಯಾಮರಾಜು, ಸಮಕುಲಾಧಿಪತಿ ಉಮೇಶ್‌ ರಾಜು, ಉಪಕುಲಪತಿ ಡಾ. ಎಂ. ಧನಂಜಯ ಇದ್ದರು.

ರೇವಾ ವಿಶ್ವವಿದ್ಯಾಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರನ್ನು ಕುಲಪತಿ ಡಾ. ಪಿ.ಶ್ಯಾಮರಾಜು ಅಭಿನಂದಿಸಿದರು. ಸಂಸದ ತೇಜಸ್ವಿ ಸೂರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.