ADVERTISEMENT

‘ತೈಲ ಆಮದು: ಹೊಸ ತಂತ್ರಜ್ಞಾನ’

ಸಿಪಿಆರ್‌ಐ ವಜ್ರಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:25 IST
Last Updated 16 ಜನವರಿ 2020, 20:25 IST

ಬೆಂಗಳೂರು: ‘ವಿದೇಶಗಳಿಂದ ತೈಲ ಆಮದು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೂತನ ಇಂಧನ ತಂತ್ರಜ್ಞಾನ ಅಭಿವೃದ್ದಿಪಡಿಸುತ್ತಿದೆ’ ಎಂದು ಮುಂಬೈನ ರಾಸಾಯನಿಕ ತಾಂತ್ರಿಕ ಸಂಸ್ಥೆಯ ಪ್ರಾಧ್ಯಾಪಕ ಜಿ.ಡಿ. ಯಾದವ್‌ ಹೇಳಿದರು.

ನಗರದಲ್ಲಿ ಗುರುವಾರ ಕೇಂದ್ರೀಯ ವಿದ್ಯುತ್‌ ಸಂಶೋಧನಾ ಸಂಸ್ಥೆಯ (ಸಿಪಿಆರ್‌ಐ) ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್‌, ಡೀಸೆಲ್‌ಗಿಂತ ನವೀಕರಿಸಹುದಾದ ಶಕ್ತಿ ಸಂಪನ್ಮೂಲಗಳ ಬಳಕೆಯ ಅಗತ್ಯತೆ ಹೆಚ್ಚಿದೆ’ ಎಂದರು.‘2040ರ ವೇಳೆಗೆ ಜಲಜನಕದಿಂದ ಶುದ್ಧ ಇಂಧನವನ್ನು ಪಡೆಯಬಹುದಾಗಿದೆ. ಸೌರವಿದ್ಯುತ್‌ಗೆ ಪರ್ಯಾಯವಾಗಿ ಈ ಇಂಧನದಿಂದ ವಿದ್ಯುತ್‌ ಪಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದರು.

ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್‌ ಲೋಬೋ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.