ADVERTISEMENT

ಸ್ಥೂಲಕಾಯ ನಿವಾರಣೆಗೆ ಹೊಸ ಚಿಕಿತ್ಸೆ

ಮಣಿಪಾಲ್ ಆಸ್ಪತ್ರೆಯಲ್ಲಿ ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:08 IST
Last Updated 20 ಮಾರ್ಚ್ 2019, 20:08 IST
ಮಣಿಪಾಲ್ ಆಸ್ಪತ್ರೆಯಲ್ಲಿ ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಅನ್ನು ಲೋಕಾರ್ಪಣೆಗೊಳಿಸಲಾಯಿತು
ಮಣಿಪಾಲ್ ಆಸ್ಪತ್ರೆಯಲ್ಲಿ ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಅನ್ನು ಲೋಕಾರ್ಪಣೆಗೊಳಿಸಲಾಯಿತು   

ಬೆಂಗಳೂರು:ಹೆಚ್ಚುತ್ತಿರುವ ಸ್ಥೂಲಕಾಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಮಣಿಪಾಲ್ ಆಸ್ಪತ್ರೆಯು ‘ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಕ್ಲಿನಿಕ್’ ಆರಂಭಿಸಿದೆ.

ಆಸ್ಪತ್ರೆಯ ಗ್ಯಾಸ್ಟ್ರೊಎಂಟಿರಾಲಜಿ ವಿಭಾಗದ ಡಾ.ಮೊಹಿತ್‌ ಶೆಟ್ಟಿ, ‘ಎಂಡೊಸ್ಕೊಪಿಕ್ ಬ್ಯಾರಿಯಾಟ್ರಿಕ್ ಥೆರಪಿ (ಇಬಿಟಿ) ಸ್ಥೂಲಕಾಯ ನಿರ್ವಹಣೆಗಾಗಿ ಇರುವ ಹೊಸ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನ. ಇದರಿಂದ ಶಸ್ತ್ರಚಿಕಿತ್ಸೆಯಿಲ್ಲದೇ ದೇಹ ತೂಕವನ್ನು ಸುಲಭವಾಗಿ ಕಡಿಮೆಗೊಳಿಸಬಹುದು’ ಎಂದರು.

ದೇಹದ ತೂಕ ಹೆಚ್ಚಾದರೆ ಸ್ಥೂಲಕಾಯ ಸಮಸ್ಯೆ ಎದುರಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ ಎಂದರು.

ADVERTISEMENT

ಎಂಡೊಸ್ಕೊಪಿಕ್ ಸ್ಲೀವ್ ಗ್ಯಾಸ್ಟ್ರೊಪ್ಲಾಸ್ಟಿ (ಇಎಸ್‌ಜಿ) ಸ್ಥೂಲಕಾಯ ನಿವಾರಣೆಗಾಗಿ ಹೊಸ, ಸುರಕ್ಷಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆ ಕುರಿತು ಆಸ್ಪತ್ರೆಯಲ್ಲಿ ಕಾರ್ಯಗಾರ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.