ADVERTISEMENT

ಡಿಜಿಟಲ್ ಪಾವತಿಗೆ ‘ನೈಸ್’ ಅವಕಾಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:58 IST
Last Updated 10 ಡಿಸೆಂಬರ್ 2019, 19:58 IST
   

ಬೆಂಗಳೂರು:ಹೆದ್ದಾರಿ ಬಳಕೆ ಶುಲ್ಕವನ್ನು ಡಿಜಿಟಲ್‌ ರೂಪದಲ್ಲಿ ಪಾವತಿ ಮಾಡುವ ವ್ಯವಸ್ಥೆಯನ್ನು ನೈಸ್‌ ಸಂಸ್ಥೆಯು ಅನುಷ್ಠಾನ
ಗೊಳಿಸಿದೆ.

ನೈಸ್‌ ರಸ್ತೆ ಬಳಸುವವರು ನೈಸ್ ಇ-ಟಿಎಂಎಸ್, ಫಾಸ್ಟ್ಯಾಗ್‌, ಟ್ಯಾಪ್ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ನೈಸ್ ಟ್ಯಾಪ್ ಕಾರ್ಡ್‍ಗಳ ಮೂಲಕ ಶುಲ್ಕ ಪಾವತಿಸಬಹುದು.

ವಾಹನದಲ್ಲಿ ರೇಡಿಯೊ ತರಂಗಾಂತರ ಗುರುತು (ಆರ್‌ಎಫ್‌ಐಡಿ) ವ್ಯವಸ್ಥೆ ಅಳವಡಿಸಿ ಮಾಲೀಕರು ತಮ್ಮ ಉಳಿತಾಯ ಖಾತೆಯಿಂದ ನೇರವಾಗಿ ಶುಲ್ಕ ಪಾವತಿಸಬಹುದು.

ADVERTISEMENT

ವಾಹನದ ಮುಂಭಾಗದ ಗಾಜಿನ ಮೇಲೆ ಈ ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಂಟಿಸಲಾಗುತ್ತದೆ. ಈ ಟೋಲ್‌ ಗೇಟ್‌ಗಳ ಮೂಲಕ ಹಾದು ಹೋಗುವ ವಾಹನಗಳಿಂದ ತನ್ನಿಂದ ತಾನೆ ಶುಲ್ಕ ಕಡಿತಗೊಳ್ಳು ತ್ತದೆ ಎಂದು ನೈಸ್‌ ಸಂಸ್ಥೆ
ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.