ADVERTISEMENT

ಜುಲೈ 1ರಿಂದ ನೈಸ್‌ ಟೋಲ್‌ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 21:19 IST
Last Updated 29 ಜೂನ್ 2022, 21:19 IST
   

ಬೆಂಗಳೂರು: ನೈಸ್‌ ಕಂಪನಿ ರಸ್ತೆ ಬಳಕೆ ಶುಲ್ಕವನ್ನು (ಟೋಲ್‌) ಜುಲೈ 1ರಿಂದ ಜಾರಿಗೆ ಬರುವಂತೆ ಹೆಚ್ಚಿಸಿದೆ.

ಹೊಸೂರಿನಿಂದ ಕನಕಪುರ ರಸ್ತೆವರೆಗೆ ₹70 ಇದ್ದ ಟೋಲ್‌ ಕಾರ್‌ಗೆ ₹80 ಆಗಿದೆ. ಬಸ್‌ ₹225 ನೀಡಬೇಕಿದೆ. ಮೈಸೂರು ರಸ್ತೆ ತುಮಕೂರು ರಸ್ತೆವರೆಗೆ ₹75 ಇದ್ದ ಟೋಲ್‌ ಕಾರ್‌ಗೆ ₹85 ಆಗಿದೆ. ಬಸ್‌ ₹145 ನೀಡಬೇಕಿದೆ.

ಒಪ್ಪಂದದಂತೆ ಪ್ರತಿ ವರ್ಷವೂ ಟೋಲ್‌ ಹೆಚ್ಚಿಸಬೇಕು. ಆದರೆ ಐದು ವರ್ಷಗಳ ನಂತರ ಟೋಲ್‌ ಹೆಚ್ಚಿಸಲಾಗಿದೆ. ಹೀಗಾಗಿ ವಾಸ್ತವವಾಗಿ ಹೆಚ್ಚಿಸಬೇಕಾದ ಟೋಲ್‌ಗಿಂತ ಇದು ಕಡಿಮೆಯಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.