ADVERTISEMENT

ತೇಜಸ್ವಿ ‍ಪರ ನಿರ್ಮಲಾ ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:08 IST
Last Updated 14 ಏಪ್ರಿಲ್ 2019, 20:08 IST
   

ಬೆಂಗಳೂರು: ‘ಭ್ರಷ್ಟಾಚಾರರಹಿತ ಮತ್ತು ಜನರಿಗಾಗಿ 24 ಗಂಟೆ ದುಡಿಯುವ ಸರ್ಕಾರವೇ ನಮ್ಮ ಗುರಿ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಭಾನುವಾರ ಮತ ಯಾಚಿಸಿದರು. ‘ದೇಶದಲ್ಲಿ ಉತ್ತಮ ಕೆಲಸಗಳಿಗಾಗಿ ವಿಶ್ವಾಸಾರ್ಹ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರರಹಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಸಾರ್ವಜನಿಕರ ಹಿತಾಸಕ್ತಿಗಳಿಗಾಗಿ ಭ್ರಷ್ಟಾಚಾರರಹಿತ ಸರ್ಕಾರಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಬೇಕಿದೆ’ ಎಂದರು.

ನಿರ್ಮಲಾ ಸೀತಾರಾಮನ್‌ ಅವರು ಇಂಗ್ಲಿಷ್‌ನಲ್ಲಿ ಮತ ಕೇಳಿದರು. ಅದಕ್ಕೆ ಕೆಲವು ಮಹಿಳೆಯರು ‘ಕನ್ನಡದಲ್ಲಿ ಮತ ಯಾಚನೆ ಮಾಡಬೇಕು’ ಎಂದು ಒತ್ತಾಯಿಸಿದರು. ‘ನನಗೆ ಕನ್ನಡ ಬರುವುದಿಲ್ಲ. ಹಾಗಾಗಿ, ಇಂಗ್ಲಿಷ್‌ನಲ್ಲಿ ಮತ ಕೇಳುತ್ತಿದ್ದೇನೆ’ ಎಂದು ನಿರ್ಮಲಾ ಸಮಜಾಯಿಷಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.