ADVERTISEMENT

ರಾಜಾನುಕುಂಟೆಯಲ್ಲಿ ಪಿ.ಯು ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 19:58 IST
Last Updated 6 ಸೆಪ್ಟೆಂಬರ್ 2020, 19:58 IST

ಹೆಸರಘಟ್ಟ: ರಾಜಾನುಕುಂಟೆ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

‘ರಾಜಾನುಕುಂಟೆ ಗ್ರಾಮದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮುಗಿದ ಕೂಡಲೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಆರ್ಥಿಕವಾಗಿ ಗಟ್ಟಿ ಇದ್ದವರು ಮಾತ್ರ ಖಾಸಗಿ ಕಾಲೇಜುಗಳಿಗೆ ಸೇರಿಕೊಳ್ಳುತ್ತಾರೆ. ಮಧ್ಯಮ ವರ್ಗ ಮತ್ತು ಬಡವರಿಗಾಗಿ ಗ್ರಾಮದಲ್ಲಿ ಪಿಯು ಕಾಲೇಜು ತೆರೆದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರಾಜೇಂದ್ರ ಕುಮಾರ್.

ಡಿಡಿಪಿಯು ಜಿ.ಕೆ. ಶಿವರಾಮ್ ಪ್ರತಿಕ್ರಿಯಿಸಿ, ‘ಗ್ರಾಮದಲ್ಲಿ ಪಿಯು ಕಾಲೇಜು ತೆರೆಯಲು ಗಮನ ಹರಿಸಲಾಗುವುದು‘ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.