ADVERTISEMENT

ಅನುಮತಿ ಇಲ್ಲದ ಶಾಲೆಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:56 IST
Last Updated 21 ನವೆಂಬರ್ 2019, 2:56 IST

ಬೆಂಗಳೂರು: ಲಗ್ಗರೆಯಲ್ಲಿ ಶಿಕ್ಷಣ ಇಲಾಖೆಯ ಅನಮತಿ ಪಡೆಯದೆನಡೆಯುತ್ತಿದ್ದ ‘ಲಿಟ್ಲ್‌ ಕಿಡ್ಜ್‌’ ಪೂರ್ವ ಪ್ರಾಥಮಿಕ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ.

‘ಅಕ್ರಮ ಶಾಲೆ ಉದ್ಘಾಟಿಸಿದ ಸಚಿವ ಸುರೇಶ್‌ ಕುಮಾರ್‌’ ಎಂಬ ಶಿರೋನಾಮೆಯೊಂದಿಗೆ ಬುಧವಾರ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಈ ಶಾಲೆಗೆ ನೋಟಿಸ್‌ ಜಾರಿಗೊಳಿಸಿದ್ದು, ಅನುಮತಿ ಪಡೆಯದೆ ಶಾಲೆ ನಡೆಸುತ್ತಿರುವುದಕ್ಕಾಗಿ ಕ್ರಿಮಿನಲ್‌ ಪ್ರಕರಣ ಹೂಡುವ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರೊಬ್ಬರಿಗೆ ಸೇರಿದ ಈ ಶಾಲೆಯನ್ನು ಸ್ವತಃ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಉದ್ಘಾಟಿಸಿದ್ದರು. ಇದು ಅನಧಿಕೃತ ಶಾಲೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಸಚಿವರು ಹೇಳಿದ್ದರು ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.