ADVERTISEMENT

ಹಿರಿಯ ಸಾಹಿತಿ, ಕಾದಂಬರಿಕಾರ ಶೇಷನಾರಾಯಣ ನಿಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 6:40 IST
Last Updated 7 ಆಗಸ್ಟ್ 2019, 6:40 IST
ಶೇಷನಾರಾಯಣ (ಚಿತ್ರ ಕೃಪೆ ಕಣಜ)
ಶೇಷನಾರಾಯಣ (ಚಿತ್ರ ಕೃಪೆ ಕಣಜ)   

ಬೆಂಗಳೂರು: ಹಿರಿಯ ಸಾಹಿತಿ, ಕಾದಂಬರಿಕಾರ ಶೇಷನಾರಾಯಣ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 6.30ಕ್ಕೆ ನಿಧನರಾದರೆಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ADVERTISEMENT

ಸಾಹಿತ್ಯ ಕೃಷಿ

ಕಥಾ ಸಂಕಲನಗಳು:ಸೀಳುನಾಯಿ, ಮೊಲ್ಲೆ ಮಲ್ಲಿಗೆ (ಬೆಂಗಳೂರು ವಿ.ವಿ.ದ ಪಿಯುಸಿ ಪಠ್ಯ) ಕುಮುದ, ಅಹಲ್ಯೆ ಕಲ್ಲಾಗಲಿಲ್ಲ, ಕೃಷ್ಣನ ಬಲಗಾಲು, ಶಕುನಿಮಾವ.

ಕಾದಂಬರಿಗಳು: ಮೂಲನಕ್ಷತ್ರ, ಕಪಿಲೆ, ಪದ್ಮರಂಗು, ನೊರೆ, ಎರಡು ಉಂಗುರ, ಬೆಳಗಾಯಿತು, ಸೌಮ್ಯ ಮುಂತಾದವು

ನಾಟಕ, ಮಕ್ಕಳ ಸಾಹಿತ್ಯ, ಜೀವನಚರಿತ್ರೆಗಳು ಸೇರಿದಂತೆ ತಮಿಳಿನಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.