ADVERTISEMENT

‘ರೋಗಿಗಳಿಗೆ ಉತ್ತಮ ಚಿಕಿತ್ಸೆ ಮುಖ್ಯ’

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:39 IST
Last Updated 2 ಜೂನ್ 2019, 19:39 IST
ಕಾರ್ಯಾಗಾರವನ್ನು ಉಷಾ ಭಂಡಾರಿ ಉದ್ಘಾಟಿಸಿದರು. ಡಾ.ಬಿಂದು ಮ್ಯಾಥ್ಯೂ, ಸುನೀತಾ ಡೊಮಿಂಗೊ, ಡಾ.ಭಾರತಿ, ಶೋಭಾ ರಾಮಕೃಷ್ಣ ಇದ್ದಾರೆ.
ಕಾರ್ಯಾಗಾರವನ್ನು ಉಷಾ ಭಂಡಾರಿ ಉದ್ಘಾಟಿಸಿದರು. ಡಾ.ಬಿಂದು ಮ್ಯಾಥ್ಯೂ, ಸುನೀತಾ ಡೊಮಿಂಗೊ, ಡಾ.ಭಾರತಿ, ಶೋಭಾ ರಾಮಕೃಷ್ಣ ಇದ್ದಾರೆ.   

ಬೆಂಗಳೂರು: ‘ರೋಗಿಗಳಿಗೆ ನೀಡುವ ತುರ್ತು ಚಿಕಿತ್ಸೆಯನ್ನು ಉತ್ತಮಪಡಿಸಿಕೊಳ್ಳುವುದು ಅತಿ ಮುಖ್ಯ’ ಎಂದು ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನ ಉಷಾ ಭಂಡಾರಿ ತಿಳಿಸಿದರು.

ತುರ್ತು ಚಿಕಿತ್ಸಾ ನೀತಿಗಳನ್ನು ಉತ್ತಮಪಡಿಸಿಕೊಳ್ಳುವ ಕುರಿತು ಯಲಹಂಕದ ಆದಿತ್ಯ ನರ್ಸಿಂಗ್‌ ಕಾಲೇಜಿನಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡುವ ಚಿಕಿತ್ಸೆ, ಔಷಧಿ ಹಾಗೂ ಶುಶ್ರೂಷೆ ಪರಿಣಾಮಕಾರಿಯಾಗಿದ್ದರೆ ಆದಷ್ಟು ಶೀಘ್ರ ರೋಗಿಗಳು ಗುಣಮುಖರಾಗಲು ಸಾಧ್ಯ ಎಂದು ಅವರು ಹೇಳಿದರು.

ADVERTISEMENT

ಕಾಲೇಜಿನ ಪ್ರಾಂಶುಪಾಲರಾದ ಶೋಭಾ ರಾಮಕೃಷ್ಣ, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.