ADVERTISEMENT

ಕಸ ನಿರ್ವಹಣೆ ಸೆಸ್‌ ಕೈಬಿಡಲು ಶಾಸಕ ಅಶ್ವತ್ಥನಾರಾಯಣ್‌ ಒತ್ತಾಯ

ಆನ್‌ಲೈನ್‌ ಅಭಿಯಾನದ ಮೊರೆ ಹೋದ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:09 IST
Last Updated 2 ಅಕ್ಟೋಬರ್ 2018, 19:09 IST

ಬೆಂಗಳೂರು: ಹಸಿ ಕಸವನ್ನು ಬಳಸಿ ಮನೆಯಲ್ಲೇ ಕಾಂಪೋಸ್ಟ್‌ ತಯಾರಿಸುವವರಿಗೆ ‘ಘನತ್ಯಾಜ್ಯ ನಿರ್ವಹಣೆ ಸೆಸ್‌’ನಿಂದ ರಿಯಾಯಿತಿ ನೀಡಬೇಕು ಎಂದು ಮಲ್ಲೇಶ್ವರ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಆನ್‌ನೈಲ್‌ ಅಭಿಯಾನ ಆರಂಭಿಸಿದ್ದಾರೆ.

ಅವರು change.orgನಲ್ಲಿ ಈ ಕುರಿತ ಮನವಿಯನ್ನು ಅವರು ಮಂಗಳವಾರ ಹಂಚಿಕೊಂಡಿದ್ದು, ನೂರಕ್ಕೂ ಅಧಿಕ ಮಂದಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವುದು ಸುಲಭದ ವಿಷಯವಲ್ಲ. ಮನೆಯಲ್ಲಿ ಹಾಗೂ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಕಾಂ‍ಪೋಸ್ಟ್‌ ತಯಾರಿಸುತ್ತಿರುವವರಿಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ. ಅದರ ಬದಲು ಬಿಬಿಎಂಪಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಕಸವನ್ನು ಪಾಲಿಕೆಗೆ ಕಸ ನೀಡುವವರು ಹಾಗೂ ಕಾಂಪೋಸ್ಟ್‌ ತಯಾರಿಸುವವರಿಗೆ ಒಂದೇ ರೀತಿಯ ತೆರಿಗೆ ವಿಧಿಸುವುದು ಸರಿಯಲ್ಲ’ ಎಂದು ಅಶ್ವತ್ಥನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶಾಸಕನಾಗಿ ನೇರವಾಗಿ ಈ ಕುರಿತು ಸರ್ಕಾರವನ್ನು ಒತ್ತಾಯಿಸಬಹುದಿತ್ತಲ್ಲವೇ’ ಎಂಬ ಪ್ರಶ್ನೆಗೆ, ‘ಆನ್‌ಲೈನ್‌ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಸಮಾನ ಆಸಕ್ತಿಯ ಅನೇಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.