ADVERTISEMENT

ಬೆಂಗಳೂರು | ವೈಟ್‌ಫೀಲ್ಡ್‌ನಲ್ಲಿ ಆಸ್ಟರ್ ಆಸ್ಪತ್ರೆ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 16:29 IST
Last Updated 31 ಅಕ್ಟೋಬರ್ 2023, 16:29 IST
ಆಸ್ಪತ್ರೆಯನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಸಂಸದ ಪಿ.ಸಿ. ಮೋಹನ್, ಜೆಡಿಯು ಮುಖಂಡ ಮಹಿಮಾ ಪಟೇಲ್, ಡಾ.ಆಜಾದ್ ಮೂಪೆನ್, ಡಾ. ನಿತಿನ್ ಶೆಟ್ಟಿ, ಸಂಸ್ಥೆಯ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷ ಡಾ. ಸೋಮಶೇಖರ್ ಎಸ್.ಪಿ. ಹಾಗೂ ವೈದ್ಯರು ಇದ್ದಾರೆ.
ಆಸ್ಪತ್ರೆಯನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಸಂಸದ ಪಿ.ಸಿ. ಮೋಹನ್, ಜೆಡಿಯು ಮುಖಂಡ ಮಹಿಮಾ ಪಟೇಲ್, ಡಾ.ಆಜಾದ್ ಮೂಪೆನ್, ಡಾ. ನಿತಿನ್ ಶೆಟ್ಟಿ, ಸಂಸ್ಥೆಯ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷ ಡಾ. ಸೋಮಶೇಖರ್ ಎಸ್.ಪಿ. ಹಾಗೂ ವೈದ್ಯರು ಇದ್ದಾರೆ.   

ಬೆಂಗಳೂರು: ಆಸ್ಟರ್ ಡಿಎಂ ಹೆಲ್ತ್‌ಕೇರ್ ಸಂಸ್ಥೆಯು ನಗರದ ವೈಟ್‌ಫೀಲ್ಡ್‌ನಲ್ಲಿ ನಿರ್ಮಿಸಿರುವ 506 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮಂಗಳವಾರ ಚಾಲನೆ ದೊರೆತಿದೆ. 

ನಗರದಲ್ಲಿ ಕಾರ್ಯಾರಂಭಿಸಿದ ಸಂಸ್ಥೆಯ ಮೂರನೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದರು. 

ಸಮಾರಂಭದಲ್ಲಿ ಆಸ್ಪತ್ರೆಯ ವಿಶೇಷತೆ ಬಗ್ಗೆ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಆಜಾದ್ ಮೂಪೆನ್, ‘ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಕ್ಯಾನ್ಸರ್, ಹೃದ್ರೋಗ ಸೇರಿ ವಿವಿಧ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ. ಕ್ಯಾನ್ಸರ್‌ನ ನಿಖರ ಚಿಕಿತ್ಸೆ ಇಂಟ್ರಾ ಆಪರೇಟಿವ್ ಎಲೆಕ್ಟ್ರಾನ್ ರೇಡಿಯೇಷನ್ ಥೆರಪಿಯನ್ನು ಈ ಆಸ್ಪತ್ರೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಂದೇ ಸೂರಿನಡಿ ವಿವಿಧ ವಿಭಾಗಗಳು ಕಾರ್ಯನಿರ್ವಹಿಸಲಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು. 

ADVERTISEMENT

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿತಿನ್ ಶೆಟ್ಟಿ, ‘ಪರಿಣತಿ ಹೊಂದಿದ ವೈದ್ಯರ ತಂಡವನ್ನು ಆಸ್ಪತ್ರೆ ಹೊಂದಿದೆ. ವಿಶ್ವದರ್ಜೆಯ ಚಿಕಿತ್ಸೆಯನ್ನು ರೋಗಿಗಳಿಗೆ ಒದಗಿಸಲಾಗುತ್ತದೆ. ಸಮಗ್ರ ಆರೋಗ್ಯ ಅನುಭವವನ್ನು ಈ ಆಸ್ಪತ್ರೆ ನೀಡಲಿದೆ’ ಎಂದು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.