ADVERTISEMENT

ಬೆಂಗಳೂರು | ಆನ್‌ಲೈನ್ ಮದ್ಯ ಮಾರಾಟಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 21:30 IST
Last Updated 29 ಜುಲೈ 2020, 21:30 IST

ಬೆಂಗಳೂರು: ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಮದ್ಯ ಮಾರಾಟ ಸಂಘಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

‘ಕೋವಿಡ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಪರವಾನಗಿದಾರರು ಸಂಕಷ್ಟದಲ್ಲಿ ಇದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಹಲವು ಮನವಿ ಸಲ್ಲಿಸಿದ್ದರೂ ಪರಿಗಣಿಸಿಲ್ಲ.ಆನ್‌ಲೈನ್ ಮದ್ಯ ಮಾರಾಟ ಸಂಬಂಧಕಂಪನಿಯೊಂದು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಆದರೂ,ಆನ್‌ಲೈನ್ ಮದ್ಯ ಮಾರಾಟದ ಪ್ರಸ್ತಾಪವನ್ನು ಮುನ್ನಲೆಗೆ ತಂದಿರುವುದು ಸರಿಯಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ ಹೆಗ್ಡೆ ಹೇಳಿದ್ದಾರೆ.

‘ಮದ್ಯ ಜೀವನಾಶ್ಯಕ ವಸ್ತು ಅಲ್ಲ. ಹೀಗಾಗಿ, ಆನ್‌ಲೈನ್‌ನಲ್ಲಿ ಲಭ್ಯವಾಗಬಾರದು. ಆನ್‌ಲೈನ್‌ನಲ್ಲಿ ಯಾವ ವಯಸ್ಸಿನವರು ಮದ್ಯ ಖರೀದಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಆಗುವುದಿಲ್ಲ. ದೇಶದಲ್ಲಿ ಎಲ್ಲೂ ಇ‌ಲ್ಲದ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರ ಮುತುವರ್ಜಿ ವಹಿಸುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ಸನ್ನದು ಶುಲ್ಕ ಹೆಚ್ಚಳ ಮಾಡಿರುವುದರಿಂದ ರಾಜ್ಯ ಸರ್ಕಾರದ ವರಮಾನ ಹತ್ತು ವರ್ಷಗಳಲ್ಲಿ ಭಾರಿ ಏರಿಕೆಯಾಗಿದೆ. 2011-12ರಲ್ಲಿ ₹9,827 ಕೋಟಿ ಇದ್ದ ವರಮಾನ 2019–20ನೇ ಸಾಲಿಗೆ ₹21,486 ಕೋಟಿ ಆಗಿದೆ. ಇದು ಮದ್ಯ ಮಾರಾಟ ಪ್ರಮಾಣ ಹೆಚ್ಚಳದಿಂದ ಬಂದ ವರಮಾನ ಅಲ್ಲ. ಸನ್ನದು ಶುಲ್ಕದಿಂದ ಬಂದಿರುವ ಆದಾಯ. ಎಂಎಸ್‌ಐಎಲ್‌ ಸನ್ನದುಗಳ ಶುಲ್ಕ ಕಡಿಮೆ ಇದ್ದು, ಸಿಎಲ್‌–7ನಿಂದ ಬರುತ್ತಿರುವ ವರಮಾನವೇ ಹೆಚ್ಚು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.