ADVERTISEMENT

ಬಟ್ಟೆ ಆರ್ಡರ್‌ ಮಾಡಿ ₹45 ಸಾವಿರ ಕಳೆದುಕೊಂಡರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:36 IST
Last Updated 11 ಫೆಬ್ರುವರಿ 2020, 19:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಫೇಸ್‌ಬುಕ್‌’ನಲ್ಲಿದ್ದ ಲಿಂಕ್‌ ಮೂಲಕ ₹894 ಪಾವತಿಸಿ ಬಟ್ಟೆ ಖರೀದಿಸಿದ್ದ ನಗರದ ಯುವತಿಯೊಬ್ಬರು, ಆ ಹಣ ವಾಪಸು ಪಡೆಯಲು ಹೋಗಿ ₹44,900ಕಳೆದುಕೊಂಡಿದ್ದಾರೆ.

ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜ. 9ರಂದು ಯುವತಿ ಬಟ್ಟೆ ಖರೀದಿಸಿದ್ದರು. ಕೆಲ ದಿನ ಬಿಟ್ಟು ಪಶ್ಚಿಮ ಬಂಗಾಳದವನೆಂದು ಹೇಳಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ಆರ್ಡರ್ ರದ್ದಾಗಿರುವುದಾಗಿ ಹೇಳಿದ್ದ. ಹಣ ಮರುಪಾವತಿ ಮಾಡುವುದಾಗಿ ತಿಳಿಸಿ ಲಿಂಕ್‌ ಕಳುಹಿಸಿದ್ದ. ಲಿಂಕ್‌ ಅನ್ನು ತನ್ನ ಮೊಬೈಲ್‌ ನಂಬರ್‌ಗೆ ವಾಪಸು ಕಳುಹಿಸಿದರೆ ಹಣ ಜಮೆ ಆಗುವುದಾಗಿ ಹೇಳಿದ್ದ’ ಎಂದು ಪೊಲೀಸರುಹೇಳಿದರು.

ADVERTISEMENT

‘ಆರೋಪಿ ಮಾತು ನಂಬಿದ್ದ ಯುವತಿ, ಲಿಂಕ್‌ ಕಳುಹಿಸಿದ್ದರು. ಅದಾಗಿ ಕೆಲ ನಿಮಿಷಗಳಲ್ಲೇ ಯುವತಿಯ ಖಾತೆಯಿಂದ₹ 44,900 ಡ್ರಾ ಆಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.