ADVERTISEMENT

ಜಯನಗರ: ಅಶ್ವತ್ಥ ಮರಕ್ಕೆ ವಿಷ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 19:46 IST
Last Updated 23 ಜನವರಿ 2019, 19:46 IST
ಅಶ್ವತ್ಥ ಮರಕ್ಕೆ ತೂತು ಕೊರೆದಿರುವುದು
ಅಶ್ವತ್ಥ ಮರಕ್ಕೆ ತೂತು ಕೊರೆದಿರುವುದು   

ಬೆಂಗಳೂರು: ಜಯನಗರದ ನಾಲ್ಕನೇ ಟಿ ಬ್ಲಾಕ್‌ನ 18ನೇ ಮುಖ್ಯರಸ್ತೆಯ 2ನೇ ಅಡ್ಡ ರಸ್ತೆಯ ಬಳಿ ಕಿಡಿಗೇಡಿಗಳು ಅಶ್ವತ್ಥ ಮರವೊಂದಕ್ಕೆ ಐದು ಕಡೆ ತೂತು ಕೊರೆದು ವಿಷ ಉಣಿಸಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಸಸ್ಯವೈದ್ಯ ವಿಜಯ್‌ ನಿಶಾಂತ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅವರು ಮರಕ್ಕೆ ಪೋಷಕಾಂಶಗಳನ್ನು ಉಣಿಸಿ ಚಿಕಿತ್ಸೆ ನೀಡಿದರು.

‘ಈ ಅಶ್ವತ್ಥ ಮರವನ್ನು ಸಾಯಿಸಲು ಹೇಗೆ ಮನಸ್ಸು ಬಂತೋ ತಿಳಿಯದು. ಉಳಿದ ಮರಗಳಿಗೆ ಹೋಲಿಸಿದರೆ ಈ ಮರ ಹೆಚ್ಚು ಆಮ್ಲಜನಕವನ್ನು ಹೊರಸೂಸುತ್ತದೆ. ಬೆರಳೆಣಿಕೆಯಷ್ಟಿರುವ ಈ ಮರಗಳನ್ನು ಉಳಿಸಿಕೊಳ್ಳಬೇಕಾದ ಹೊಣೆ ಎಲ್ಲರ ಮೇಲೂ ಇದೆ’ ಎಂದು ವಿಜಯ್‌ ನಿಶಾಂತ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.