ADVERTISEMENT

ಐಟಿ ಉದ್ಯೋಗಿಗಳಿಂದ ಪಾರಾಯಣ

ಹೊಸ ವರ್ಷದ ರಜೆಯನ್ನು ವಿದ್ಯಾಪೀಠದಲ್ಲಿ ಕಳೆದ ಟೆಕ್ಕಿಗಳು

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 22:58 IST
Last Updated 1 ಜನವರಿ 2020, 22:58 IST
ಬೆಂಗಳೂರಿನ ವಿದ್ಯಾಪೀಠದಲ್ಲಿ ಬುಧವಾರ ಐಟಿ ಕ್ಷೇತ್ರದ ವೃತ್ತಿಪರರು ಪಾರಾಯಣ ಮಾಡಿದರು
ಬೆಂಗಳೂರಿನ ವಿದ್ಯಾಪೀಠದಲ್ಲಿ ಬುಧವಾರ ಐಟಿ ಕ್ಷೇತ್ರದ ವೃತ್ತಿಪರರು ಪಾರಾಯಣ ಮಾಡಿದರು   

ಬೆಂಗಳೂರು: ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿನಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಬೃಂದಾವನ ಸಮೀಪ ಬುಧವಾರ 50ಕ್ಕೂ ಅಧಿಕ ಐಟಿ ವೃತ್ತಿಪರರು ಪಾರಾಯಣ ನಡೆಸಿದರು.

ಹೊಸ ವರ್ಷದ ಪ್ರಯುಕ್ತ ಇವರಿಗೆಲ್ಲ ರಜೆ ಇತ್ತು. ಪೇಜಾವರ ಶ್ರೀಗಳ ಮೇಲಿನ ಭಕ್ತಿ, ಗೌರವದಿಂದಾಗಿ ತಮ್ಮ ರಜೆಯನ್ನು ಪಾರಾಯಣ ಮಾಡುವುದಕ್ಕೆ ಬಳಸಿಕೊಳ್ಳಲು ಇವರು ಮುಂದಾದರು.

ಪೇಜಾವರ ಶ್ರೀಗಳು ನಿತ್ಯ ಪಠಿಸುತ್ತಿದ್ದ ವಿಷ್ಣು ಸಹಸ್ರನಾಮ, ಭಗವದ್ಗೀತೆ, ವೇದ, ವಿವಿಧ ಸ್ತೋತ್ರಗಳನ್ನು ಇವರು ಪಠಿಸಿದರು. ಜತೆಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಅಹೋರಾತ್ರಿ ಪಾರಾಯಣ ಮುಂದುವರಿದಿದೆ.

ADVERTISEMENT

ಚಿಕ್ಕಾಲಸಂದ್ರ ರಾಘವೇಂದ್ರ ಭಜನಾ ಮಂಡಳಿಯ 150ಕ್ಕೂ ಅಧಿಕ ಮಹಿಳೆಯರು ಭಜನೆ ಮಾಡಿದರು. ಈ ಮಧ್ಯೆ, ಬೃಂದಾವನ ದರ್ಶನ ಮಾಡಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದು, ಶ್ರೀಗಳನ್ನು ಸ್ಮರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.