ADVERTISEMENT

'ಸತ್ಯಶೋಧನಾ ವರದಿ: ಬಿಜೆಪಿ-ಆರ್‌ಎಸ್‌ಎಸ್‌ ಪ್ರಾಯೋಜಿತ ಷಡ್ಯಂತ್ರ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 17:44 IST
Last Updated 5 ಸೆಪ್ಟೆಂಬರ್ 2020, 17:44 IST
   

ಬೆಂಗಳೂರು: 'ಬೆಂಗಳೂರಿನ ಗಲಭೆ, ಹಿಂಸಾಚಾರ ಪ್ರಕರಣಗಳ ಸಂಬಂಧ 'ಸಿಟಿಜನ್ಸ್ ಫಾರ್ ಡೆಮಾಕ್ರಸಿ' ಸಿದ್ಧಪಡಿಸಿರುವ ಸತ್ಯಶೋಧನಾ ವರದಿಯು ಆಡಳಿತ ವೈಫಲ್ಯ ಮುಚ್ಚಿಡುವ ಹಾಗೂ ನಿರ್ದಿಷ್ಟ ಸಮುದಾಯದ ಮೇಲೆ ಗಲಭೆ ಹೊಣೆ ಹೊರಿಸಲು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ಪ್ರಾಯೋಜಿತ ಷಡ್ಯಂತ್ರ' ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‍ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ಆರೋಪಿಸಿದ್ದಾರೆ.

'ಹಿಂದೂಗಳನ್ನು ಗುರಿಪಡಿಸಿ, ಗಲಭೆ ನಡೆದಿರುವುದಾಗಿ ವರದಿಯಲ್ಲಿದೆ. ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧ. ಪ್ರವಾದಿ ನಿಂದನೆಯಪೋಸ್ಟ್ ಹಾಕಿದ್ದ ಆರೋಪಿಯ ಬಂಧನಕ್ಕೆ ಪೊಲೀಸರು ವಿಳಂಬಿಸಿದ ಕಾರಣದಿಂದ ಗಲಭೆ ನಡೆಯಿತು. ಈ ವೇಳೆ ದೇವಸ್ಥಾನ ಹಾಗೂ ಹಿಂದೂಗಳ ಮನೆಗಳಿಗೆ ಹಾನಿಯಾಗದಂತೆ ಅಲ್ಲಿನ ಮುಸ್ಲಿಂ ಯುವಕರು ರಕ್ಷಣೆ ನೀಡಿರುವುದಾಗಿ ಬಂಧಿತ ಆರೋಪಿ ನವೀನ್ ತಾಯಿಯೇ ಹೇಳಿದ್ದಾರೆ. ಆದರೆ, ಸತ್ಯಶೋಧನಾ ತಂಡವು ಏಕಪಕ್ಷೀಯ ವರದಿ ಮೂಲಕ ಘಟನೆಯನ್ನು ಕೋಮುವಾದೀಕರಣ ಮಾಡಲು ಯತ್ನಿಸಿದೆ' ಎಂದು ದೂರಿದರು.

'ಸತ್ಯಶೋಧನಾ ಸಮಿತಿಯಲ್ಲಿರುವ ಸದಸ್ಯರು ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡವರು. ಈ ಹಿಂದೆ ದೆಹಲಿಯಲ್ಲಿ ನಡೆದ ಗಲಭೆಯನ್ನೂ ಹಿಂದೂ ವಿರೋಧಿ ಕೃತ್ಯ ಎಂದು ಬಿಂಬಿಸಲು ಇಂತಹದ್ದೇ ಪ್ರಯತ್ನ ನಡೆದಿತ್ತು. ಈಗ ಸತ್ಯಶೋಧನಾ ತಂಡದಿಂದ ಆರ್‌ಎಸ್‌ಎಸ್‌-ಬಿಜೆಪಿ ನಿರೀಕ್ಷಿಸಿದಂತಹ ವರದಿ ಹೊರಬಿದ್ದಿದೆ. ಇದರ ಹಿಂದಿನ ಪಿತೂರಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.